ತಮಿಳುನಾಡಿನಲ್ಲಿ SIR ಕರಡು ಪಟ್ಟಿ ಬಿಡುಗಡೆ; 97 ಲಕ್ಷಕ್ಕೂ ಹೆಚ್ಚು ಹೆಸರುಗಳು ಮತಪಟ್ಟಿಯಿಂದ ಡಿಲಿಟ್

ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್
ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್
Published on
ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ಆಯೋಗದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ(SIR) ಕರಡು ಪಟ್ಟಿ ಇಂದು(ಡಿ. 19) ಬಿಡುಗಡೆ ಆಗಿದ್ದು, ರಾಜ್ಯಾದ್ಯಂತ ಒಟ್ಟು 97 ಲಕ್ಷ ಹೆಸರುಗಳನ್ನು ತೆಗೆದು ಹಾಕಲಾಗಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಒಟ್ಟು 97 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಈ ಪಟ್ಟಿಯಲ್ಲಿ 26,94,672 ಮತದಾರರು ಮೃತರಾಗಿದ್ರೆ, 66,44,881 ಮತದಾರರು ಸ್ಥಳಾಂತರಗೊಂಡಿದ್ದಾರೆ. ಹಾಗೆಯೇ 3,39,278 ಮತದಾರರು ಬಹು ಸ್ಥಳಗಳಲ್ಲಿ ದಾಖಲಾಗಿದ್ದಾರೆ ಎನ್ನಲಾಗಿದೆ.
ಜಿಲ್ಲೆಗಳ ಪೈಕಿ ಚೆನ್ನೈನಲ್ಲಿ ಅತಿ ಹೆಚ್ಚು ಶೇ. 35.6 ರಷ್ಟು ಹೆಸರನ್ನು ತೆಗೆದು ಹಾಕಲಾಗಿದೆ. ಒಟ್ಟು 14.25 ಲಕ್ಷ ಮತದಾರರನ್ನು ತೆಗೆದು ಹಾಕಲಾಗಿದೆ. ಕೊಯಮತ್ತೂರಿನಲ್ಲಿ 6.50 ಲಕ್ಷ, ದಿಂಡಿಗಲ್ ಜಿಲ್ಲೆಯಲ್ಲಿ 2.34 ಲಕ್ಷ, ಕರೂರಿನಲ್ಲಿ 79,690, ಕಾಂಚೀಪುರಂ ಜಿಲ್ಲೆಯಲ್ಲಿ 2.74 ಲಕ್ಷ ಮತದಾರರನ್ನು ಅಳಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್, ಶೋಲಿಂಗನಲ್ಲೂರು ಮತ್ತು ಪಲ್ಲವರಂ ಕ್ಷೇತ್ರಗಳು ಕರಡು ಪಟ್ಟಿಯಲ್ಲಿ ಅತಿ ಹೆಚ್ಚು ಮತದಾರರನ್ನು ಅಳಿಸಲಾಗಿದೆ. ಸೂಕ್ತ ಕಾರ್ಯವಿಧಾನವನ್ನು ಅನುಸರಿಸದೆ ಯಾವುದೇ ಹೆಸರನ್ನು ಅನಿಯಂತ್ರಿತವಾಗಿ ಕೈಬಿಡಲಾಗಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net