SIR: ಅನಕ್ಷರಸ್ಥರಿಗೆ ಸಹಾಯ ಆಗಲಿ ಎಂದು ಬಿಎಲ್​ಓಗಳು ಫಾರಂ ತುಂಬುತ್ತಿದ್ದಾರೆ, ತಪ್ಪೇನಲ್ಲ: ಸಚಿವ ಜಾರ್ಜ್

ಸಚಿವ ಕೆ.ಜೆ.ಜಾರ್ಜ್
ಸಚಿವ ಕೆ.ಜೆ.ಜಾರ್ಜ್
Published on
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಆಯೋಗದ ಎಸ್​ಐಆರ್(SIR) ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಬಿಜೆಪಿ-ಜೆಡಿಎಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಜೆ.ಜಾರ್ಜ್​, ಅನಕ್ಷರಸ್ಥರಿಗೆ ಸಹಾಯ ಆಗಲಿ ಎಂದು ಬಿಎಲ್​ಓಗಳು ಫಾರಂ ತುಂಬುತ್ತಿದ್ದಾರೆ, ತಪ್ಪೇನಲ್ಲ ಎಂದು ಹೇಳಿದ್ದಾರೆ.
ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಶ್ಚಿಮ ಬಂಗಾಳ, ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ ಎಸ್​ಐಆರ್ ಪ್ರಕ್ರಿಯೆ ನಡೆದಿದೆ. ಅಲ್ಲಿ ಲಕ್ಷಾಂತರ ಜನರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಿದ್ದರು. ಹಾಗಾಗಿ ನಮ್ಮಲ್ಲೂ ಆ ರೀತಿ ಆಗಬಾರದು ಎಂಬ ಉದ್ದೇಶದಿಂದ ನಾವು ಎಚ್ಚರಿಕೆಯಿಂದ ಇದ್ದೇವೆ. ಆ ರಾಜ್ಯಗಳಲ್ಲಿ ಮಾಡಿದಂತೆ ಇಲ್ಲೂ ಕುತಂತ್ರ ಮಾಡಲು ಯೋಜಿಸಿದ್ದರು. ಆದರೆ ನಾವು ಅದನ್ನು ತಡೆದ ಹಿನ್ನೆಲೆ ಈಗ ಅಕ್ರಮ ಎಂದು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಎಸ್ಐಆರ್ ನಡೆಸುತ್ತಿರೋದು ಚುನಾವಣಾ ಆಯೋಗ. ಅದರ ಪ್ರಕ್ರಿಯೆಯಲ್ಲಿ ಮೂರು ಪಕ್ಷಗಳು ಭಾಗಿಯಾಗಿವೆ. ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಸೇರಿ ಎಲ್ಲಾ ರಾಜಕೀಯ ಪಕ್ಷಗಳು ಬಿಎಲ್ಒ ಗಳು ಸಹಕಾರ ಮಾಡ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ಅನಕ್ಷರಸ್ತ ಅನಕ್ಷರಸ್ಥರಿಗೆ ಸಹಾಯ ಆಗಲಿ ಅಂತ ಬಿಎಲ್ಒ ಗಳು ಫಾರಂ ತುಂಬುವ ಕೆಲಸ ಮಾಡ್ತಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net