ಗಡಿಗಳು ಬದಲಾಗಿ ಸಿಂಧ್​ ಪ್ರಾಂತ್ಯ ಭಾರತಕ್ಕೆ ಮರಳಬಹುದು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ | Rajnath Singh

Rajnath Singh |  ರಕ್ಷಣಾ ಸಚಿವ ರಾಜನಾಥ್ ಸಿಂಗ್ ( ಕೃಪೆ-ಪಿಟಿಐ)
Rajnath Singh | ರಕ್ಷಣಾ ಸಚಿವ ರಾಜನಾಥ್ ಸಿಂಗ್ ( ಕೃಪೆ-ಪಿಟಿಐ)
Published on
ದೆಹಲಿ: ಸಿಂಧ್ ಪ್ರಾಂತ್ಯವು ಪ್ರಸ್ತುತ ಭಾರತದ ಜೊತೆ ಇಲ್ಲದಿರಬಹುದು, ನಾಗರಿಕ ಸಂಪರ್ಕದ ವಿಷಯದಲ್ಲಿ ಅದು ಸದಾ ಭಾರತದ ಭಾಗವಾಗಿರುತ್ತದೆ, ಮುಂದೆ ಗಡಿಗಳು ಬದಲಾಗಬಹುದು ಮತ್ತು ಆ ಪ್ರದೇಶವು ದೇಶಕ್ಕೆ ಮರಳಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವ ಸಿಂಗ್​, ಸಿಂಧಿ ಹಿಂದೂಗಳು ಎಲ್.ಕೆ. ಅಡ್ವಾಣಿಯಂತಹ ನಾಯಕರ ಪೀಳಿಗೆಯವರು, ಸಿಂಧ್ ಪ್ರದೇಶವನ್ನು ಭಾರತದಿಂದ ಬೇರ್ಪಡಿಸುವುದನ್ನು ಎಂದಿಗೂ ಒಪ್ಪಿಕೊಂಡಿಲ್ಲ, ಸಿಂಧ್‌ನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಹಿಂದೂಗಳು ಸಿಂಧೂ ನದಿಯನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಸಿಂಧ್‌ನ ಅನೇಕ ಮುಸ್ಲಿಮರು ಸಿಂಧೂ ನದಿಯ ನೀರು ಮೆಕ್ಕಾದ ಆಬ್-ಎ-ಜಮ್‌ಜಮ್‌ ನೀರಿನಷ್ಟೆ ಪವಿತ್ರವೆಂದು ಭಾವಿಸಿದ್ದಾರೆ, ಇದು ಅಡ್ವಾಣಿ ಅವರ ಉಲ್ಲೇಖ ಎಂದು ಹೇಳಿದರು.
ಇಂದು ಸಿಂಧ್ ಪ್ರದೇಶ ಭಾರತದ ಭಾಗವಾಗಿಲ್ಲದಿರಬಹುದು, ಆದರೆ ನಾಗರಿಕತೆಯ ದೃಷ್ಟಿಯಿಂದ ಅದು ಯಾವಾಗಲೂ ಭಾರತದ ಭಾಗವಾಗಿರುತ್ತದೆ. ಭೂಮಿಯ ವಿಷಯದಲ್ಲಿ, ಗಡಿಗಳು ಬದಲಾಗಬಹುದು. ಯಾರಿಗೆ ಗೊತ್ತು, ನಾಳೆ ಸಿಂಧ್ ಮತ್ತೆ ಭಾರತಕ್ಕೆ ಮರಳಬಹುದು. ಸಿಂಧೂ ನದಿಯನ್ನು ಪವಿತ್ರವೆಂದು ಪರಿಗಣಿಸುವ ನಮ್ಮ ಸಿಂಧ್ ಜನರು ಎಲ್ಲೇ ಇದ್ದರು, ಯಾವಾಗಲೂ ನಮ್ಮವರೇ ಆಗಿರುತ್ತಾರೆ ಎಂದು ಹೇಳಿದರು.
ಸೆಪ್ಟೆಂಬರ್ 22 ರಂದು ಮೊರಾಕೊದಲ್ಲಿ ಭಾರತೀಯ ಸಮುದಾಯದೊಂದಿಗೆ ನಡೆದ ಸಂವಾದದಲ್ಲಿ ಸಿಂಗ್, ಪಿಒಕೆಯಲ್ಲಿರುವ ಜನರು ಆಕ್ರಮಣಕಾರರಿಂದ ಸ್ವಾತಂತ್ರ್ಯವನ್ನು ಒತ್ತಾಯಿಸುತ್ತಿರುವುದು, ಯಾವುದೇ ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಳ್ಳದೆ ಭಾರತವು ಪಿಒಕೆಯನ್ನು ಮರಳಿ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.
ಭಯೋತ್ಪಾದಕ ಮೂಲಸೌಕರ್ಯ ಮತ್ತು ಅದನ್ನು ಬೆಂಬಲಿಸುವ ಪಾಕಿಸ್ತಾನಿ ಪಡೆಗಳ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ಸಮಯದಲ್ಲಿ, ಕೆಲವು ತಜ್ಞರು ಭಾರತವು ಪಿಒಕೆಗೆ ನುಗ್ಗಿ ಭಾರತಕ್ಕೆ ಸೇರಿದ ಪ್ರದೇಶವನ್ನು ಭದ್ರಪಡಿಸಿಕೊಳ್ಳಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net