_1766858141953.webp?w=480&auto=format%2Ccompress&fit=max)
_1766858141953.webp?w=480&auto=format%2Ccompress&fit=max)
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಸದ್ಯದಲ್ಲೇ ಹೊಸ ದಾಖಲೆ ಬರೆಯುವ ಮುನ್ಸೂಚನೆ ಸಿಕ್ಕಿದೆ. ಮಾರುಕಟ್ಟೆ ತಜ್ಞರ ಪ್ರಕಾರ, 2026ರ ವೇಳೆಗೆ ಬೆಳ್ಳಿ ಬೆಲೆ ಈಗಿನ ದರಕ್ಕಿಂತ ಶೇ. 18ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
2025ರಲ್ಲಿ ಈಗಾಗಲೇ ಚಿನ್ನಕ್ಕಿಂತ ಬೆಳ್ಳಿಯೇ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿದೆ. ಈ ಏರುಗತಿ ಬರುವ ವರ್ಷವೂ ಮುಂದುವರಿಯಲಿದೆ. ಆಭರಣಗಳ ಬೇಡಿಕೆಯಷ್ಟೇ ಅಲ್ಲದೆ, ಕೈಗಾರಿಕಾ ಕ್ಷೇತ್ರದಿಂದ ಬರುತ್ತಿರುವ ಭಾರಿ ಬೇಡಿಕೆಯೂ ಬೆಳ್ಳಿ ಬೆಲೆ ಏರಿಕೆಗೆ ಕಾರಣ. ವಿಶೇಷವಾಗಿ ಸೌರಶಕ್ತಿ ಪ್ಯಾನೆಲ್ಗಳು, ಎಲೆಕ್ಟ್ರಿಕ್ ವಾಹನಗಳು, 5ಜಿ ತಂತ್ರಜ್ಞಾನದಲ್ಲಿ ಬೆಳ್ಳಿಯನ್ನು ಹೇರಳವಾಗಿ ಬಳಸಲಾಗುತ್ತಿದೆ. ಗಣಿಗಾರಿಕೆಯಿಂದ ಸಿಗುತ್ತಿರುವ ಬೆಳ್ಳಿಯ ಪ್ರಮಾಣ ಬೇಡಿಕೆಗೆ ತಕ್ಕಷ್ಟು ಇಲ್ಲ.
ದೇಶದಲ್ಲಿ ಈಗಾಗಲೇ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 2.50 ಲಕ್ಷ ರೂ.ಗಳ ಗಡಿದಾಟಿದೆ. 2026ರ ಅಂತ್ಯದ ವೇಳೆಗೆ ಇದು ಪ್ರತಿ ಕೆಜಿಗೆ 2.75 ಲಕ್ಷ ರೂ.ವರೆಗೆ ತಲುಪಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ ಶನಿವಾರ ಬೆಳ್ಳಿಯ ಬೆಲೆ ಕೆಜಿಗೆ 2,57,700 ರೂ.ಗೆ ತಲುಪಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,545 ರೂ. ಆಗಿದೆ.