'ನನ್ನನ್ನು ಸೈಲೆಂಟ್ ಮಾಡಬಹುದಷ್ಟೇ ಸೋಲಿಸೋಕೆ ಆಗಲ್ಲ'; AAPಗೆ ವಿರುದ್ಧ ಮೌನ ಮುರಿದ ರಾಘವ್​ ಚಡ್ಡಾ..Raghav Chadda

Raghav Chadda
Raghav Chadda
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್​ ಚಡ್ಡಾ ವಜಾ
  • ಎಎಪಿ ನಿರ್ಧಾರದ ಬಗ್ಗೆ ಮೌನ ಮುರಿದ ಸಂಸದ ರಾಘವ್​ ಚಡ್ಡಾ
  • ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೇ ತಪ್ಪಾ ಎಂದು ಪ್ರಶ್ನೆ
ನವದೆಹಲಿ: ಸದಾ ಜನಪರ ಕಾಳಜಿ ವಹಿಸುತ್ತಿದ್ದ ಸಂಸದ ರಾಘವ್ ಚಡ್ಡಾರನ್ನು ಆಮ್ ಆದ್ಮಿ ಪಕ್ಷ ಗುರವಾರ ರಾಜ್ಯ ಸಭಾ ಉಪನಾಯಕನ ಸ್ಥಾನದಿಂದ ಪದಚ್ಯುತಿಗೊಳಿಸಿ, ಸಂಸತ್​ನಲ್ಲಿ ಹೆಚ್ಚು ಮಾತನಾಡಲು ಅವಕಾಶ ನೀಡದಂತೆ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆ ಬೆನ್ನಲ್ಲೇ ಯುವನಾಯಕ ಚಡ್ಡಾ (Raghav Chadda Message For Aam Aadmi) ಮೌನ ಮುರಿದದ್ದು ಹೀಗೆ..

ಟ್ವೀಟ್​ನಲ್ಲಿ ಏನಿದೆ?

ನಾನು ಸೈಲೆಂಟ್ ಆಗಿದ್ದೇನೆ, ಸೋತಿಲ್ಲ; ' ಆಮ್ ಆದ್ಮಿಗೆ ' ರಾಘವ್ ಚಡ್ಡ ಸಂದೇಶ

‘ನನ್ನನ್ನು ಸೈಲೆಂಟ್ ಮಾಡಬಹುದಷ್ಟೇ ಸೋಲಿಸೋಕೆ ಆಗಲ್ಲ. ಸಂಸತ್​​ನಲ್ಲಿ ಮಾತನಾಡುವ ಅವಕಾಶ ಸಿಕ್ಕಾಗಲೆಲ್ಲ ಜನರ ಪರ ದನಿ ಎತ್ತಿದ್ದೇನೆ. ವಿಮಾನ ನಿಲ್ದಾಣದಲ್ಲಿನ ದುಬಾರಿ ಆಹಾರ ದರ, ಪಿತೃತ್ವ ರಜೆ, ರೀಚಾರ್ಜ್​ ಹಣದ ಬಗ್ಗೆ, ಪಿತೃತ್ವ ರಜೆ, ದುಬಾರಿ ಟ್ಯಾಕ್ಸ್​ ಬಗ್ಗೆ ಮಾತನಾಡಿದ್ದೇನೆ. ಬಹುಷಃ ನಾನು ಸಾಮಾನ್ಯವಲ್ಲದ ವಿಚಾರದ ಬಗ್ಗೆ ಮಾತನಾಡಿರಬಹುದು. ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಸಾರ್ವಜನಿಕವಾಗಿ ಮಾತನಾಡೋದು ಅಪರಾಧವೇ? ನಾನು ಮಾಡಿದ ತಪ್ಪಾದರು ಏನು? ಎಂದು ರಾಘವ್​ ಚಡ್ಡಾ ಪ್ರಶ್ನೆ ಮಾಡಿದ್ದಾರೆ.
"ನನ್ನನ್ನು ಸಂಸತ್​ನಲ್ಲಿ ಮಾತನಾಡದಂತೆ  ತಡೆಯಿಡಿದಿರುವ ಕಾರಣ ನಾನು  ಆಮ್​ ಆದ್ಮಿ ಪಕ್ಷಕ್ಕೆ ಈ ಪ್ರಶ್ನೆ ಕೇಳುತ್ತಿದ್ದೇನೆ. ಜನರಿಗೆ ಧನ್ಯವಾದ ಹೇಳುತ್ತಾ  ಮಾತನಾಡಿದ ಅವರು, ನಾನು ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ನೀವು ಅದನ್ನು ಒಪ್ಪಿ ನನ್ನಲ್ಲಿ ಧೈರ್ಯ ತುಂಬಿದ್ದೀರಿ. ಪ್ರೋತ್ಸಾಹಿಸಿದ್ದೀರಿ ನಿಮಗೆ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ.

ಶಾಂತವಾಗಿರಬಹುದು, ಸಿಡಿದೇಳುವ ಶಕ್ತಿ ಇದೆ

"ನಾನು ಸದ್ಯಮೌನಾವಾಗಿರೋದನ್ನ ಶರಣಾಗತಿ ಎಂದು ಭಾವಿಸೋಕೆ ಹೋಗಬೇಡಿ, ನಾನು ಶಾಂತವಾಗಿ ಹರಿಯುವ ನದಿಯಾಗಿರಬಹುದು. ಆದರೆ, ಪ್ರವಾಹದಂತೆ ಸಿಡಿದೇಳುವ ಶಕ್ತಿ ನನ್ನಲಿದೆ" ಎಂದು ಅವರು ಮಾತನಾಡಿದ್ದಾರೆ.

ಚಡ್ಡಾರ ಜನಪರ ಬೇಡಿಕೆಗಳೇನಿತ್ತು?

ಎಕ್ಸ್​ನಲ್ಲಿ ತಾವು ಇಲ್ಲಿಯವರೆಗೂ ಜನಪರ ಮಾತನಾಡಿದ್ದ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಶ್ನೆಗಳನ್ನು ಎಎಪಿ ಮುಂದಿಟ್ಟು ಗುಡುಗಿದ್ದಾರೆ.  ಗಿಗ್​ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಅವರೇ ಸ್ವತಂ ಒಂದು ದಿನ ಡೆಲಿವರಿ ಬಾಯ್​ ಆಗಿ ಕೆಲಸ ಮಾಡಿದ್ದರು. ಜೊತೆಗೆ  ಅಥಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಡೆಲಿವರಿ ಪಾಲುದಾರರ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಧ್ವನಿ ಎತ್ತಿದ್ದರು. 
ಮೊಬೈಲ್ ರೀಚಾರ್ಜ್ ಪ್ಲಾನ್‌ಗಳು 28 ದಿನಗಳ ಬದಲಿಗೆ ಪೂರ್ಣ ತಿಂಗಳವರೆಗೆ (30/31 ದಿನಗಳು) ಇರಬೇಕು ಎಂದು ಒತ್ತಾಯಿಸಿದ್ದರು. ವಿಮಾನ ನಿಲ್ದಾಣದಲ್ಲಿ ಕೈಗೆಟುಕುವ ದರದಲ್ಲಿ ಆಹಾರ ಸಿಗುವಂತೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇತ್ತೀಚಗೆ ಪುರುಷರಿಗೂ ಪ್ರಿತೃತ್ವ ರಜೆ ನೀಡಬೇಕೆಂದು ಒತ್ತಾಯಿಸಿದ್ದರು.  ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದಾಗ ವಿಧಿಸುವ ದಂಡವನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net