ಶುಭ್​ಮನ್ ಗಿಲ್ ಅಬ್ಬರ: 117 ಎಸೆತಗಳಲ್ಲಿ ದ್ವಿಶತಕ ಬಾರಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್ | Shubman Gill

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್​ಮನ್ ಗಿಲ್ ಅಬ್ಬರಿಸಿದ್ದು​, ತಮ್ಮ ಎರಡನೇ ದ್ವಿಶತಕ ಸಿಡಿಸಿದ್ದಾರೆ.
ಶುಭ್​ಮನ್ ಗಿಲ್ ಅಬ್ಬರ: 117 ಎಸೆತಗಳಲ್ಲಿ ದ್ವಿಶತಕ ಬಾರಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್ | Shubman Gill
Published on: 

Shubman Gill: ಗುವಾಹಟಿಯಲ್ಲಿ ಇಂದು(ಸೆ.30) ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್​ಮನ್ ಗಿಲ್ ಅಬ್ಬರಿಸಿದ್ದು​, 117 ಎಸೆತಗಳಲ್ಲಿ ತಮ್ಮ ಎರಡನೇ ದ್ವಿಶತಕ ಸಿಡಿಸಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿರುವ 406 ರನ್​ಗಳ ಗುರಿ ಬೆನ್ನಟ್ಟಿರುವ ಭಾರತ ತಂಡದ ಪರವಾಗಿ ಶುಭ್​ಮನ್ ಗಿಲ್ ಅದ್ಭುತವಾಗಿ ಆಟವಾಡಿದ್ದು, 62 ಎಸೆತಗಳಲ್ಲಿ ಶತಕ ಸಿಡಿಸಿದ್ರೆ, 117 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದಾರೆ. ಮತ್ತು ಬೃಹತ್ ಮೊತ್ತವನ್ನು ಚೇಸ್​ ಮಾಡಿದ್ದು, ಪಂದ್ಯದ ಗೆಲುವಿನ ಸನಿಹದಲ್ಲಿದ್ದಾರೆ.

ವೆಸ್ಟ್ ಇಂಡೀಸ್ ಬೌಲರ್‌ಗಳನ್ನು ಚಚ್ಚಿ ಬೀಸಾಕಿರುವ ಗಿಲ್ 24 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳು ಸಿಡಿಸುವ ಮೂಲಕ ತಮ್ಮ ಎರಡನೇ ದ್ವಿಶತಕ ಸಿಡಿಸಿದರು. 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ ಗಳಿಸಿದ 208 ರನ್‌ಗಳ ಬಳಿಕ, ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಗಳಿಸಿದ ಎರಡನೇ ದ್ವಿಶತಕ ಇದಾಗಿದೆ.

ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಒಂದಕ್ಕಿಂತ ಹೆಚ್ಚು ದ್ವಿಶತಕಗಳನ್ನು ಬಾರಿಸಿದ ಭಾರತೀಯ ಬ್ಯಾಟರ್‌ಗಳ ಪೈಕಿ, ಇದೀಗ ಗಿಲ್ ರೋಹಿತ್ ಶರ್ಮಾ ಅವರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಮೂರು ಏಕದಿನ ದ್ವಿಶತಕಗಳನ್ನು ಗಳಿಸಿದ ಏಕೈಕ ಬ್ಯಾಟರ್ ಆಗಿ ರೋಹಿತ್ ಮುಂದುವರಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net