ಮತ್ತೊಂದೆಡೆ, ತವರು ಮೈದಾನದಲ್ಲೇ ಮುಖಭಂಗ ಅನುಭವಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಐಪಿಎಲ್ 2026ರ ಸೀಸನ್ ಅತ್ಯಂತ ಕರಾಳವಾಗಿ ಅಂತ್ಯಗೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ, ಜೋಶ್ ಇಂಗ್ಲಿಸ್ (72) ಮತ್ತು ಆಯುಷ್ ಬದೋನಿ (43) ಅವರ ಹೋರಾಟದಿಂದ 196 ರನ್ ಗಳಿಸಿತ್ತು. ಆದರೆ ಬೌಲಿಂಗ್ ವೈಫಲ್ಯದಿಂದಾಗಿ ಈ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಲಕ್ನೋ ತಂಡ ಈ ಸೀಸನ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಜಯ ಸಾಧಿಸಿ, ತನ್ನ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಪ್ರದರ್ಶನ ನೀಡಿ ಟೂರ್ನಿಯಿಂದ ಬೇಸರದಿಂದಲೇ ಹೊರನಡೆದಿದೆ,(ಏಜೆನ್ಸೀಸ್).