ಸ್ಥಳೀಯ ತೇನಂಪೇಟೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಗುರುವಾರ(ಡಿ. 11) ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಪಿ.ಟಿ.ಸೆಲ್ವಕುಮಾರ್ ಡಿಎಂಕೆ ಸೇರಿದ್ದಾರೆ. ಇದೇ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈಮುರುಗನ್, ಅಧಿಕೃತ ವಕ್ತಾರ ಆರ್.ಎಸ್. ಭಾರತಿ, ಸಚಿವ ಪಿ.ಕೆ. ಶೇಖರ್‌ಬಾಬು, ಆಲಂಕುಳಂ ಶಾಸಕ ಮನೋಜ್ ಪಾಂಡಿನ್ ಮತ್ತು ಇತರಿದ್ದರು.