ಬಿಜೆಡಿಗೆ ಶಾಕ್; ರಾಜ್ಯಸಭಾ ಸಂಸದ ಸಮಂತ ರಾಯ್ ರಾಜೀನಾಮೆ; ಬಿಜೆಪಿ ಸೇರುವ ಸಾಧ್ಯತೆ| Samanta Roy

ದೇಬಾಶಿಶ್ ಸಮಂತ್ ರಾಯ್
ದೇಬಾಶಿಶ್ ಸಮಂತ್ ರಾಯ್
Published on
ಭುವನೇಶ್ವರ: ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ (ಬಿಜೆಡಿ) ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು, ಆಪ್ತ ಸಗಹಾಯಕ, ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ದೇಬಾಶಿಶ್ ಸಮಂತ್ ರಾಯ್(Samanta Roy) ಸೋಮವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಸಮಂತ ರಾಯ್ ಇಂದು ಬೆಳಿಗ್ಗೆ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಪತ್ರದಲ್ಲಿ ಪಕ್ಷದಲ್ಲಿ ತಮಗೆ ಸಾಕಷ್ಟು ಮನ್ನಣೆ ಇಲ್ಲದ ಕಾರಣ ಮತ್ತು ತಮ್ಮ ಸೇವೆಗಳು ಪಕ್ಷಕ್ಕೆ ಅಗತ್ಯವಿಲ್ಲದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಬಳಿಕ ರಾಜ್ಯಸಭೆಯ ಉಪಾಧ್ಯಕ್ಷರನ್ನು ಭೇಟಿಯಾಗಿ ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಇಂದು ಬೆಳಿಗ್ಗೆ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಬರೆದಿದ್ದೇನೆ. ರಾಜ್ಯಸಭೆಯ ಉಪಾಧ್ಯಕ್ಷರನ್ನು ಭೇಟಿಯಾಗಿ ರಾಜ್ಯಸಭಾ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ. ಅವಿಭಜಿತ ಕಟಕ್ ಜಿಲ್ಲೆ ಮತ್ತು ಒಡಿಶಾಗೆ ರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಲು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಕ್ಕಾಗಿ ನವೀನ್ ಪಟ್ನಾಯಕ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಸಮಂತ ರಾಯ್ ಅವರಿಗಿಂತ ಮೊದಲು, ಜೆಡಿಯು ರಾಜ್ಯಸಭಾ ಸಂಸದರಾದ ಸುಜೀತ್ ಕುಮಾರ್ ಮತ್ತು ಮಮತಾ ಮಹಾಂತ್ ಇತ್ತೀಚೆಗೆ ರಾಜೀನಾಮೆ ನೀಡಿದರು. ನಂತರ, ಇಬ್ಬರೂ ಬಿಜೆಪಿ ಟಿಕೆಟ್‌ಗಳ ಮೇಲೆ ರಾಜ್ಯಸಭೆಗೆ ಆಯ್ಕೆಯಾದರು. ಈಗ ರಾಜ್ಯಸಭೆಯಲ್ಲಿ ಬಿಜೆಡಿಯ ಬಲ ಐದಕ್ಕೀಳಿದಿದೆ.
ಇನ್ನೂ ಬಿಜೆಡಿಗೆ ರಾಜೀನಾಮೆ ನೀಡಿರುವ ಸಮಂತ ರಾಯ್ ಬಿಜೆಪಿಗೆ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಸೇರಿದ ಬಳಿಕ ಮತ್ತೆ ಬಿಜೆಪಿ ಸದಸ್ಯರಾಗಿ ರಾಜ್ಯಸಭೆ ಆಯ್ಕೆಯಾಗುತ್ತಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net