ನೇಹಾ ಬೋರಾಗೆ ಶಾಕ್; ಪೀಸ್ ಬಾಂಡ್ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್ | Neha Bora

ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್​ಎ) ಅಧ್ಯಕ್ಷೆ ನೇಹಾ ಬೋರಾಗೆ ದೆಹಲಿ ಹೈಕೋರ್ಟ್​​ನಲ್ಲಿ ಹಿನ್ನಡೆಯಾಗಿದ್ದು, ಶುಕ್ರವಾರ(ಅ. 23) 10,000 ರೂ. ಮೌಲ್ಯದ ಪೀಸ್ ಬಾಂಡ್ ಸಲ್ಲಿಸುವ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಗೊಳಿಸಿದೆ.
ನೇಹಾ ಬೋರಾಗೆ ಶಾಕ್; ಪೀಸ್ ಬಾಂಡ್ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್ | Neha Bora
Published on: 

ನವದೆಹಲಿ: ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್​ಎ) ಅಧ್ಯಕ್ಷೆ ನೇಹಾ ಬೋರಾಗೆ ದೆಹಲಿ ಹೈಕೋರ್ಟ್​​ನಲ್ಲಿ ಹಿನ್ನಡೆಯಾಗಿದ್ದು, ಶುಕ್ರವಾರ(ಅ. 23) 10,000 ರೂ. ಮೌಲ್ಯದ ಪೀಸ್ ಬಾಂಡ್ ಸಲ್ಲಿಸುವ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಗೊಳಿಸಿದೆ.

ಸಿಇಸಿ ವಿರುದ್ಧ ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಗಳಲ್ಲಿ ನೇಹಾ ಬೋರಾ ಭಾಗವಹಿಸಿದ್ದರು. ಕಳೆದ ವಾರ ಜಂತರ್ ಮಂತರ್ ಕಡೆಗೆ ಅನುಮತಿಯಿಲ್ಲದೆ ತೆರಳಿ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಬಳಿಕ ಮ್ಯಾಜಿಸ್ಟ್ರೇಟ್ ನೀಡಿದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Also Read
ಆಂಧ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಗಲಾಟೆ, ಹಿಂಸಾಚಾರ: ಮೇಲ್ವಿಚಾರಣೆಗೆ ಅಮಿಕಸ್ ಕ್ಯೂರಿ ನೇಮಕ ಕೋರಿದ ಜಗನ್ | amicus curiae
ನೇಹಾ ಬೋರಾಗೆ ಶಾಕ್; ಪೀಸ್ ಬಾಂಡ್ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್ | Neha Bora

ಮ್ಯಾಜಿಸ್ಟ್ರೇಟ್ ಜಾಮೀನು ನೀಡುವ ವೇಳೆ, ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಲು ಮತ್ತು 10,000 ರೂ. ಮೌಲ್ಯದ ಶಾಂತಿ ಬಾಂಡ್‌ಗೆ ಸಹಿ ಹಾಕಲು ಆದೇಶಿಸಿತ್ತು. ಆದಾಗ್ಯೂ, ನೇಹಾ ಬೋರಾ ಅವರು ಯಾವುದೇ ಪೀಸ್ ಬಾಂಡ್​ಗೆ ಸಹಿ ಹಾಕುವ ಅಗತ್ಯವಿಲ್ಲ ಮತ್ತು ಪ್ರತಿಭಟಿಸುವ ಹಕ್ಕಿದೆ ಎಂದು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ದೆಹಲಿ ಪೊಲೀಸರು ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಕೋರ್ಟ್ ನೇಹಾ ಬೋರಾ ಅವರ ಅರ್ಜಿಯನ್ನು ವಜಾಗೊಳಿಸಿತು. ಆದಾಗ್ಯೂ, ಆದೇಶದ ಪ್ರತಿಯನ್ನು ಇನ್ನೂ ನೀಡಲಾಗಿಲ್ಲ. ನ್ಯಾಯಾಲಯದ ಅವಲೋಕನಗಳಿಗೆ ಅನುಗುಣವಾಗಿ ನೇಹಾ ಬೋರಾ ಉನ್ನತ ನ್ಯಾಯಾಲಯವನ್ನು ಸಂಪರ್ಕಿಸುವ ಸಾಧ್ಯತೆಯಿದೆ ಎನ್ನಲಾಗಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net