ಇದೇ ವೇಳೆ, ಶಿವಸೇನೆಯ ಎರಡೂ ಬಣಗಳ (ಶಿಂಧೆ ಮತ್ತು ಉದ್ಧವ್ ಠಾಕ್ರೆ) ಮರುಸೇರ್ಪಡೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಇಬ್ಬರೂ ಒಂದಾಗಲು ನಿರ್ಧರಿಸಿದರೆ ಜಗತ್ತಿನ ಯಾವುದೇ ಶಕ್ತಿಯೂ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಇತ್ತೀಚೆಗೆ ಮುಂಬೈ-ನಾಗ್ಪುರ ಸಮೃದ್ಧಿ ಹೆದ್ದಾರಿಯಲ್ಲಿ ಸತ್ತಾರ್ ಮತ್ತು ಉದ್ಧವ್ ಬಣದ ನಾಯಕ ಅಂಬಾದಾಸ್ ದಾನ್ವೆ ಸಾರ್ವಜನಿಕವಾಗಿ ಆಲಂಗಿಸಿಕೊಂಡಿದ್ದ ಫೋಟೋಗಳು ಈ ಚರ್ಚೆಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿವೆ. ಪಕ್ಷವನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದಿರುವ ಸತ್ತಾರ್, ಮುಂಬರುವ ದಿನಗಳಲ್ಲಿ ಏಕನಾಥ್ ಶಿಂಧೆ ಅವರೇ ಮುಖ್ಯಮಂತ್ರಿಯಾಗಬೇಕು, ಬಿಹಾರದಲ್ಲಿ ನಿತೀಶ್ ಕುಮಾರ್ಗೆ ಸಿಗುವ ಅವಕಾಶ ಶಿಂಧೆ ಅವರಿಗೆ ಏಕೆ ಸಿಗಬಾರದು ಎಂದು ಪ್ರಶ್ನಿಸಿದ್ದಾರೆ(ಏಜೆನ್ಸೀಸ್).