ಹೊರ್ಮುಜ್​ನಿಂದ ಹಡಗುಗಳು ಬರುತ್ತಿವೆ: ಭಾರತಕ್ಕೆ ಇಂಧನ ಕೊರತೆಯಿಲ್ಲ; ರಾಜನಾಥ್​ ಸಿಂಗ್​ ಸ್ಪಷ್ಟಣೆ! Rajnath Singh

 ಭಾರತದ ಇಂಧನ ಭದ್ರತೆ ಸುಭದ್ರವಾಗಿದೆ: ರಾಜ್​ನಾಥ್​ ಸಿಂಗ್​
ಭಾರತದ ಇಂಧನ ಭದ್ರತೆ ಸುಭದ್ರವಾಗಿದೆ: ರಾಜ್​ನಾಥ್​ ಸಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ಇಂಧನ ಭದ್ರತೆ ಸುಭದ್ರವಾಗಿದೆ: ರಾಜ್​ನಾಥ್​ ಸಿಂಗ್​
  • ಹಾರ್ಮುಂಜ್​ನಿಂದ ನಮ್ಮ ಹಡಗುಗಳು ಬರುತ್ತಿವೆ
  • ವಿರೋಧ ಪಕ್ಷಗಳು ಸುಳ್ಳು ಮಾಹಿತಿಯನ್ನು ಹರಡಬಾರದು
  • ಕೇರಳ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ
ಕೇರಳ: ಗುರುವಾರ (ಏ.2) ಕೇರಳದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್ (Rajnath Singh) ಇರಾನಿನ ಹಾರ್ಮುಂಜ್​ ಜಲಸಂಧಿಯಿಂದ ತೈಲ ಹಾಗೂ ಇಂಧನವನ್ನು ಹೊತ್ತ, ಭಾರತದ ಹಡಗುಗಳು ನೌಕಾ ಪಡೆಗಳ ಬೆಂಗಾವಲಿನಲ್ಲಿ ಭಾರತವನ್ನು ಪ್ರವೇಶಿಸುತ್ತಿದ್ದು, ದೇಶದಲ್ಲಿ ಯಾವುದೇ ರೀತಿಯ ಹಾಹಾಕಾರ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ದಿನ ಕಳೆದಂತೆ ಸಂಘರ್ಷ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ತೈಲ ಹಾಗೂ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಸಂಭವಿಸುತ್ತದೆ ಎಂದು ವಿರೋಧ ಪಕ್ಷಗಳು ಆಪಾದನೆ ಮಾಡುತ್ತಿದ್ದ ಹಿನ್ನಲೆ ಈ ಹೇಳಿಕೆ ಹೊರಬಂದಿದೆ.
ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಮ್ಮ ರಾಜತಾಂತ್ರಿಕ ನಿಲುವುಗಳ ಕಾರಣ ನಮ್ಮ ದೇಶ ಸುಭದ್ರವಾಗಿದ್ದು, ನಾಗರಿಕರು ಚಿಂತೆ ಪಡುವ ಯಾವುದೇ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನಾನು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾವುದೇ ಸಮಸ್ಯೆ ಎದುರಾದರೂ ಅದನ್ನು ನಿಗ್ರಹಿಸುವ ಶಕ್ತಿ ನಮ್ಮ ದೇಶಕ್ಕಿದೆ ಎಂದು ಅವರು ಹೇಳಿದರು.

ಕೇರಳದಲ್ಲಿ ನಮ್ಮನ್ನು ಗೆಲ್ಲಿಸಿ!

ಇದೇ ಸಂದರ್ಭದಲ್ಲಿ ಕೆಲವೇ ದಿನಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ ಎಂದು ರಕ್ಷಣಾ ಸಚಿವರು ಕೇಳಿಕೊಂಡರು.
ಪ್ರಧಾನಿ ಮೋದಿ ಅವರ ಆಡಳಿತವು 24 ಕ್ಯಾರೆಟ್​ ಚಿನ್ನವಾಗಿದ್ದು, ನಮಗೆ ಓಲೈಕೆ ರಾಜಕೀಯ ಮಾಡಲು ಬರುವುದಿಲ್ಲ, ನಮ್ಮದೇನಿದ್ದರೂ ಅಭಿವೃದ್ಧಿಯ ರಾಜಕೀಯ ಎಂದು ಹೇಳಿದ್ದಾರೆ. ಕೇರಳದಲ್ಲಿ ಏಪ್ರಿಲ್​ 9 ರಂದು 143 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶವು ಹೊರಬೀಳಲಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net