ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್‌ನಲ್ಲಿ ಉಚಿತ ಟಿಫಿನ್! ಅರ್ಧ ಕಿಲೋಮೀಟರ್ವರೆಗೆ ಸರತಿ ಸಾಲಿನಲ್ಲಿ ನಿಂತ ಜನ..Shilpa Shetty
Shilpa Shetty
Published on:
Copied
Follow Us
ಮುಂಬೈ: ( Shilpa Shetty ) ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ 'ಅಮ್ಮಕೈ' ( ammakai) ರೆಸ್ಟೋರೆಂಟ್ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಉಚಿತ ಉಪಹಾರ ನೀಡುವುದಾಗಿ ಘೋಷಿಸಿತು. ಇದರಿಂದಾಗಿ ರೆಸ್ಟೋರೆಂಟ್‌ನಲ್ಲಿ ದೊಡ್ಡ ಜನಸಂದಣಿ ಸೃಷ್ಟಿಯಾಗಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಂಪರ್ ಆಫರ್ ನೀಡಿದ ಶಿಲ್ಪಾ ಶೆಟ್ಟಿ
ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ 'ಅಮ್ಮಕೈ' ರೆಸ್ಟೋರೆಂಟ್ ಬಂಪರ್ ಆಫರ್ ನೀಡಿದೆ. ಬೆಳಿಗ್ಗೆ 9.30 ರಿಂದ 11.30 ರವರೆಗೆ ಎಷ್ಟೇ ಜನರು ಬಂದರೂ ಅವರಿಗೆ ಉಚಿತ ಉಪಹಾರ ನೀಡಲಾಗುವುದು ಎಂದು ಘೋಷಿಸಿದೆ.
ಈ ಸುದ್ದಿ ಬೆನ್ನಲ್ಲೇ ಬೆಳಿಗ್ಗೆ 7 ಗಂಟೆಯಿಂದಲೇ ಜನರು ರೆಸ್ಟೋರೆಂಟ್ ಮುಂದೆ ಬಂದು ಸಾಲಿನಲ್ಲಿ ನಿಂತಿದ್ದಾರೆ. ಬೆಳಿಗ್ಗೆ 9.30 ರಿಂದ 11.30 ರ ನಡುವೆ ಕೆಲವೇ ಜನರಿಗೆ ಉಚಿತ ಉಪಹಾರ ಸಿಕ್ಕಿತು. ಬೆಳಿಗ್ಗೆ 11.30 ರ ನಂತರ ಬಂದವರನ್ನು ಹೋಟೆಲ್ ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ.
ಪ್ರಸ್ತುತ, ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ, ಉಚಿತ ಉಪಹಾರಕ್ಕಾಗಿ ಸರದಿಯಲ್ಲಿ ನಿಂತಿರುವ ಜನರು ಬಡವರಿಗಿಂತ ಹೆಚ್ಚು ಶ್ರೀಮಂತರೆ ಇದ್ದರು ಎನ್ನಲಾಗಿದೆ.
ಈ ವೀಡಿಯೊಗೆ ಪ್ರತಿಕ್ರಿಯಿಸುತ್ತಿರುವ ನೆಟಿಜನ್‌ಗಳು, ಉಚಿತ ಟಿಫಿನ್‌ಗಾಗಿ ಅವರು ಏಕೆ ಸರತಿ ಸಾಲಿನಲ್ಲಿ ನಿಲ್ಲಬೇಕು?" "ಸರದಿಯಲ್ಲಿ ನಿಂತಿರುವವರಲ್ಲಿ ಒಬ್ಬರೂ ಬಡವರಂತೆ ಕಾಣುವುದಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.