ಪ್ರಧಾನಿ ಹುದ್ದೆ ತ್ಯಜಿಸಿ, ಸೂಪರ್ ಪಿಎಂ ಆದರು: ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ | BJP

ಸೋನಿಯಾ ಗಾಂಧಿಯವರು ಪ್ರಧಾನಿ ಹುದ್ದೆಯನ್ನು ತ್ಯಜಿಸಿದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೌಂಟರ್ ನೀಡಿದ್ದು, 2004ರಲ್ಲಿ ಪ್ರಧಾನಿ ಹುದ್ದೆಯನ್ನು ತ್ಯಜಿಸಿದರು, ಆದರೆ ರಾಷ್ಟ್ರೀಯ ಸಲಹಾ ಮಂಡಳಿಯ(ಎನ್‌ಎಸಿ) ಅಧ್ಯಕ್ಷರಾಗಿ ಸೂಪರ್ ಪಿಎಂ ಆದರು ಎಂದು ಕಿಡಿಕಾರಿದೆ.
ಪ್ರಧಾನಿ ಹುದ್ದೆ ತ್ಯಜಿಸಿ, ಸೂಪರ್ ಪಿಎಂ ಆದರು: ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ  ವಾಗ್ದಾಳಿ | BJP
Published on: 

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಬಹು ನಿರೀಕ್ಷಿತ ಆತ್ಮಚರಿತ್ರೆ ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ ಪುಸ್ತಕ ಮಂಗಳವಾರ(ನ. 10) ಬಿಡುಗಡೆಯಾಗಿದೆ. ಅದರಲ್ಲಿ ಅವರು 2004ರಲ್ಲಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ದು ಚರ್ಚೆಯಾಗುತ್ತಿದೆ.

ಸೋನಿಯಾ ಗಾಂಧಿಯವರು ಪ್ರಧಾನಿ ಹುದ್ದೆಯನ್ನು ತ್ಯಜಿಸಿದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೌಂಟರ್ ನೀಡಿದ್ದು, 2004ರಲ್ಲಿ ಪ್ರಧಾನಿ ಹುದ್ದೆಯನ್ನು ತ್ಯಜಿಸಿದರು, ಆದರೆ ರಾಷ್ಟ್ರೀಯ ಸಲಹಾ ಮಂಡಳಿಯ(ಎನ್‌ಎಸಿ) ಅಧ್ಯಕ್ಷರಾಗಿ ಸೂಪರ್ ಪಿಎಂ ಆದರು ಎಂದು ಕಿಡಿಕಾರಿದೆ.

ಈ ಕುರಿತು ಬುಧವಾರ(ನ. 11) ಸುದ್ದಿಗೋಷ್ಠಿ ನಡೆಸಿ ಸೋನಿಯಾ ಗಾಂಧಿ ಅವರ ಪುಸ್ತಕದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ, ಅವರು ಪ್ರಧಾನ ಮಂತ್ರಿ ಹುದ್ದೆಯನ್ನು ತ್ಯಜಿಸಿ, 'ಸೂಪರ್ ಪಿಎಂ' ಆದರು. ಪ್ರಧಾನಿ ಹುದ್ದೆಯನ್ನು ತ್ಯಜಿಸಿ, ಕ್ಯಾಬಿನೆಟ್ ಸಚಿವರ ಸ್ಥಾನಮಾನವನ್ನು ಪಡೆದುಕೊಂಡ ಇಂತಹ ಉದಾಹರಣೆ ಜಗತ್ತಿನ ಬೇರೆಲ್ಲೂ ನಿಮಗೆ ಸಿಗುವುದಿಲ್ಲ ಎಂದಿದ್ದಾರೆ.

Also Read
ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ; 2004ರಲ್ಲಿ ಪ್ರಧಾನಿ ಹುದ್ದೆ ನಿರಾಕರಿಸಿದ್ದೇಕೆ? ವಿವರಿಸಿರುವ ಕಾಂಗ್ರೆಸ್ ಅಧಿನಾಯಕಿ | Sonia Gandhi
ಪ್ರಧಾನಿ ಹುದ್ದೆ ತ್ಯಜಿಸಿ, ಸೂಪರ್ ಪಿಎಂ ಆದರು: ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ  ವಾಗ್ದಾಳಿ | BJP

ಸೋನಿಯಾ ಗಾಂಧಿಯವರು 'ರಾಷ್ಟ್ರೀಯ ಸಲಹಾ ಮಂಡಳಿ'ಯ ಅಧ್ಯಕ್ಷರಾದರು. ಮತ್ತು ಅದಕ್ಕಾಗಿ ಕ್ಯಾಬಿನೆಟ್ ಸಚಿವರ ಸ್ಥಾನಮಾನವನ್ನೂ ಪಡೆದರು. ಅಷ್ಟೇ ಅಲ್ಲ, ಇದು ಲಾಭದಾಯಕ ಹುದ್ದೆಯ ವ್ಯಾಪ್ತಿಯಲ್ಲಿಯೂ ಇತ್ತು. ಈ ಎಲ್ಲಾ ಸಂಗತಿಗಳು ದೇಶದ ಜನರ ಮುಂದಿವೆ. ಯುಪಿಎ ಆಡಳಿತಾವಧಿಯಲ್ಲಿ 'ಸೂಪರ್ ಪಿಎಂ' ಮತ್ತು 'ಸೂಪರ್ ಕ್ಯಾಬಿನೆಟ್' ಏನಿತ್ತು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿಯವರು ತಮ್ಮ ಆತ್ಮಚರಿತ್ರೆ 'ಬಿಲೋಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕದಲ್ಲಿ 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಗೆದ್ದ ಬಳಿಕ ಅವರು ಪ್ರಧಾನಿ ಹುದ್ದೆಯನ್ನು ನಿರಾಕರಿಸಲು ಕಾರಣವಾದ ಸಂದರ್ಭಗಳನ್ನು ವಿವರಿಸಿದ್ದಾರೆ (ಏಜೆನ್ಸೀಸ್).