ಲಿಫ್ಟ್​ನಲ್ಲಿ ಅರ್ಧಗಂಟೆ ಸಿಲುಕಿಕೊಳ್ಳುವುದು ದೊಡ್ಡ ಸಮಸ್ಯೆಯಲ್ಲ, ಆದರೂ..; ಸುರಕ್ಷಿತವಾಗಿ ಹೊರ ಬಂದ ನಂತ್ರ ಸಂಸದ ಶಶಿ ತರೂರ್ ಹೇಳಿದ್ದಿಷ್ಟು..ShashiTharoor

ShashiTharoor rescued from a stuck lift
ShashiTharoor rescued from a stuck lift
Published on

ಪ್ರಮುಖ ಮುಖ್ಯಾಂಶಗಳು

  • ಕೇರಳದ ಖಾಸಗಿ ಹೋಟೆಲ್​ನ ಲಿಫ್ಟ್​ನಲ್ಲಿ ಅರ್ಧಗಂಟೆ ಸಿಕ್ಕಿ ಹಾಕಿಕೊಂಡಿದ್ದ ಸಂಸದ ಶಶಿ ತರೂರ್​
  • ಲಿಫ್ಟ್​ನಿಂದ ತಮ್ಮನ್ನು ಹೊರತಂದ ರಕ್ಷಣಾ ಸಿಬ್ಬಂದಿಯನ್ನು ಶ್ಲಾಘಿಸಿದ ಸಂಸದ ಶಶಿ ತರೂರ್​
  • ಅರ್ಧಗಂಟೆ ಲಿಫ್ಟ್​ನಲ್ಲಿ ಸಿಕ್ಕಿ ಹಾಕಿಕೊಳ್ಳೋದು ದೊಡ್ಡ ಸಮಸ್ಯೆಯೇನಲ್ಲ ಎಂದು ಎಕ್ಸ್​ನಲ್ಲಿ ಸಂಸದ ಪೋಸ್ಟ್​
ShashiTharoor rescued from a stuck lift : ಈ ತಂತ್ರಜ್ಞಾನದ ಯುಗದಲ್ಲಿ ಯಾವಾಗ ಏನಾಗುತ್ತೋ ಎನ್ನುವ ಅರಿವೇ ಇರೋದಿಲ್ಲ. ದಿಢೀರನೇ ಲೈಟ್​ ಕಂಬಗಳು ಬ್ಲಾಸ್​ ಆದರೆ, ಮತ್ತೊಂದ ಕಡೆ ವಿದ್ಯುತ್​ ಕಡಿತಗೊಂಡು ಲಿಫ್ಟ್​ಗಳು ನಿಂತು ಹೋಗಿ  ಜನಸಾಮಾನ್ಯರು ಸಮಸ್ಯೆಯನ್ನು  ಎದುರಿಸೋದು ಇದ್ದೇ ಇದೆ. ಇದೇ ತೊಡಕಿಗೆ ಸಂಸದರೊಬ್ಬರು ಸಿಲುಕಿದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ
ಹೌದು, ಕೇರಳದ ತಿರುವನಂತಪುರಂನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರ ಸಲುವಾಗಿ ಸಂಸದ ಶಶಿ ತರೂರ್​ ಅವರು ಖಾಸಗಿ ಹೋಟೆಲ್​​ವೊಂದಕ್ಕೆ ತೆರಳಿದ್ದರು. ನಿನ್ನೆ ಸಂಜೆ 7:30ರಿಂದ ಅರ್ಧಗಂಟೆ ಲಿಫ್ಟ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಅಗ್ನಿ ಶಾಮಕ ಸಿಬ್ಬಂದಿ ಅವರನ್ನು ಅಲ್ಲಿಂದ ಹೊರ ತಂದಿರುವ ದೃಶ್ಯಾವಳಿಗಳು ಶುಕ್ರವಾರ ಸಂಜೆಯಿಂದ ಭಾರಿ ಸದ್ದು ಮಾಡುತ್ತಿವೆ. 

ಏನಾಗಿತ್ತು?

ತಿರುವನಂತಪುರಂ  ಖಾಸಗಿ ಹೋಟೆಲ್​​ನಲ್ಲಿ ರೋಟರಿ ಕ್ಲಬ್​ನ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವಿತ್ತು.ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಶಶಿ ತರೂರ್​ ಅವರು ಖಾಸಗಿ  ಹೋಟೆಲ್​​ನ ಲಿಫ್ಟ್​ ಏರಿದ್ದರು. ತಾಂತ್ರಿಕ ಸಮಸ್ಯೆ ಕಾರಣದಿಂದಾಗಿ ಲಿಫ್ಟ್​​​​ ಅರ್ಧಕ್ಕೆ ನಿಂತಿತ್ತು. ಅವರು ಒಳಗೆ ಸಿಲುಕಿಕೊಂಡರು. ಈ ವಿಡಿಯೋಗಳು ಹಾಗೂ ಹೊರಗೆ ಬಂದ ನಂತರ ಸಂಸದರ ಮುಗುಳ್ನಕ್ಕ ರೀತಿಯನ್ನು ತಮ್ಮದೇ ವಾಕ್ಯಕ್ಕೆ ರೂಪಕಗಳನ್ನು ಕೊಟ್ಟು ನೆಟ್ಟಿಗರು ಬಣ್ಣಿಸುತ್ತಿದ್ದಾರೆ. 
ಈ ಅವಘಡವನ್ನು ಅರಿತ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ಸೇವೆಯ ತಂಡವು ತರೂರ್​ ಸೇರಿದಂತೆ ಲಿಫ್ಟ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಜನರನ್ನು  ರಕ್ಷಿಸಿದರು. ಲಿಫ್ಟ್​ನಿಂದ ಹೊರ ಬರುತ್ತಲೇ ಮುಗುಳ್ನಕ್ಕ ಶಶಿ ತರೂರ್​ ಅವರು  ಅಗ್ನಿ ಶಾಮಕ ತಂಡಕ್ಕೆ ಧನ್ಯವಾದ ಹೇಳಿದರು. ಜೊತೆಗೆ ಅವರು ಹೊರ ಬರಲು ಸಹಕರಿಸಿದ ಎಲ್ಲರಿಗೂ ಶ್ಲಾಘಿಸಿರುವುದು ವಿಡಿಯೋದಲ್ಲಿ ಇದೆ.

ಎಕ್ಸ್​ನಲ್ಲಿ ಪೋಸ್ಟ್​

ಶುಕ್ರವಾರ ಸಂಜೆ ನಡೆದ ಘಟನೆ ಬಗ್ಗೆ ಶಶಿ ತರೂರ್​ ಅವರು ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವುದು ಹೀಗೆ, ಲಿಫ್ಟ್‌ನಲ್ಲಿ ಅರ್ಧ ಗಂಟೆ ಇರುವುದು ದೊಡ್ಡ ಸಮಸ್ಯೆಯಾಗಿರಲಿಲ್ಲ. ನನ್ನ ಮುಂದಿನ ಎರಡು ಅಪಾಯಿಂಟ್‌ಮೆಂಟ್‌ಗಳಿಗೆ ಸಮಸ್ಯೆಯಾಯ್ತು.  ನಾವು ಲಿಫ್ಟ್​ನಲ್ಲಿ ಸಿಕ್ಕಿಹಾಕಿಕೊಂಡ ಬಗ್ಗೆ ಕರೆ ಮಾಡಿ ತಿಳಿಸುತ್ತಲೇ ರಕ್ಷಣಾ ತಂಡ ಬಂದು ತಮ್ಮ ಕೆಲಸ ಆರಂಭಿಸಿತು. ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ವೇಗ, ದಕ್ಷತೆ ಮತ್ತು ಸಾಮರ್ಥ್ಯಕ್ಕಾಗಿ ನಾನು ನಿಮಗೆ ಅಪಾರ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಎಕ್ಸ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net