ರಾಹುಲ್ ಸಮ್ಮುಖದಲ್ಲೇ ಅವಮಾನ..? ಕಾಂಗ್ರೆಸ್​ ಸಭೆಗೆ ಸಂಸದ ತರೂರ್ ಗೈರು!​ | Shashi Tharoor

Shashi Tharoor | ಸಂಸದ ಶಶಿ ತರೂರ್ ಜೊತೆ ರಾಹುಲ್​ ಗಾಂಧಿ
Shashi Tharoor | ಸಂಸದ ಶಶಿ ತರೂರ್ ಜೊತೆ ರಾಹುಲ್​ ಗಾಂಧಿ
Published on
ತಿರುವನಂತಪುರಂ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಲು ಶುಕ್ರವಾರ ಕಾಂಗ್ರೆಸ್​ ಹೈಕಮಾಂಡ್ ಕರೆದಿರುವ ಸಭೆಗೆ ಸಂಸದ ಶಶಿ ತರೂರ್ ಹಾಜರಾಗುವುದಿಲ್ಲ ಎಂದು ವರದಿಯಾಗಿದ್ದು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಚರ್ಚೆಗೆ ಈ ಬೆಳವಣಿಗೆ ಇಂಬು ನೀಡಿದೆ.
ಕಾಂಗ್ರೆಸ್​​ನ ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕೇರಳ ಘಟಕದ ಕಾಂಗ್ರೆಸ್​ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಸೇರಿದಂತೆ ಅನೇಕರು ಉಪಸ್ಥಿತರಿರಲಿದ್ದಾರೆ.
ಇತ್ತೀಚೆಗೆ ಎರ್ನಾಕುಲಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು, ಈ ಸಭೆಯಲ್ಲಿ ಸಂಸದ ತರೂರ್​ಗೆ ಸೂಕ್ತ ಗೌರವ ನೀಡಿಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಇದರಿಂದ ಬೇಸರಗೊಂಡಿರುವ ಅವರು ಪಕ್ಷದ ನಾಯಕರುಗಳ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ರಾಜ್ಯ ನಾಯಕರು ಮತ್ತು ಹೈಕಮಾಂಡ್​​ನ ವರಿಷ್ಠರು ಸಂಪರ್ಕಿಸಲು ಪ್ರಯತ್ನಿಸಿದರೂ, ತರೂರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಶನಿವಾರ ಕೋಝಿಕ್ಕೋಡ್‌ನಲ್ಲಿ ನಡೆಯಲಿರುವ ಕೇರಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಬೆಳವಣಿಗೆಯ ಬಗ್ಗೆ ತರೂರ್ ಆಪ್ತ ನಾಯಕರು ಪ್ರತಿಕ್ರಿಯೆ ನೀಡಿದ್ದು, ಇತ್ತೀಚಿನ ಬೆಳವಣಿಗೆಗಳು ಅನಗತ್ಯ ಎಂದಿದ್ದಾರೆ. ಸಂಸದರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇರಲಿಲ್ಲ ಮತ್ತು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಾಯಕತ್ವಕ್ಕೆ ತಿಳಿಸಿದ್ದರು.
ಈಗ ಚೆಂಡು ಹೈಕಮಾಂಡ್ ಅಂಗಳದಲ್ಲಿದ್ದು, ತಿರುವನಂತಪುರದಲ್ಲಿ ತರೂರ್ ಯುವಕರು, ತಂತ್ರಜ್ಞಾನ ವೃತ್ತಿಪರರು ಮತ್ತು ಮಧ್ಯಮ ವರ್ಗದವರಲ್ಲಿ ಬಲವಾದ ಮತ ನೆಲೆಯನ್ನು ಹೊಂದಿದ್ದಾರೆ, ಬಿಜೆಪಿ ಕೂಡ ಇದರ ಮೇಲೆ ಕಣ್ಣಿಟ್ಟಿದೆ. ಜಿಲ್ಲೆಯ 14 ಶಾಸಕರಲ್ಲಿ ಯುಡಿಎಫ್ ಕೇವಲ ಒಬ್ಬ ಶಾಸಕರನ್ನು ಹೊಂದಿದೆ ಎಂಬ ಅಂಶವನ್ನು ಪರಿಗಣಿಸಿದರೆ, ಇದು ಕಾಂಗ್ರೆಸ್‌ಗೆ ಸವಾಲಾಗಲಿದೆ ಎಂದು ಹೇಳಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net