ಅಮೆರಿಕದ ಪಶ್ಚಿಮ ಕರಾವಳಿಯಿಂದ ಹಿಡಿದು ಭಾರತದ ಪಶ್ಚಿಮ ಗಡಿಯವರೆಗೂ ವ್ಯಾಪಿಸಿರುವ ಈ ಕಮಾಂಡ್, ಭಾರತ ಮತ್ತು ಅಮೆರಿಕ ನಡುವಿನ ಮಿಲಿಟರಿ ಬಾಂಧವ್ಯಕ್ಕೆ ಪ್ರಮುಖ ಕೊಂಡಿಯಾಗಿತ್ತು. ಜಂಟಿ ಸೇನಾ ಕವಾಯತು, ಕರಾವಳಿ ಭದ್ರತೆಯ ಮಾಹಿತಿ ವಿನಿಮಯ ಸೇರಿದಂತೆ ಹಿಂದೂ ಮಹಾಸಾಗರದಲ್ಲಿ ಚೀನಾದ ದಬಾಳಿಕೆಯನ್ನು ತಡೆಯಲು ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ಸೇರಿ ಕ್ವಾಡ್ ಒಕ್ಕೂಟವನ್ನು ಬಲಪಡಿಸಿದ್ದವು.