ಪ್ರಧಾನಿಯನ್ನು ಹೊಗಳಿದ ತರೂರ್​; ಮೋದಿ ಬಗ್ಗೆ ಕಾಂಗ್ರೆಸ್​ ಸಂಸದ ಹೇಳಿದ್ದೇನು..? Shashi Tharoor

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ Prime Minister Narendra Modi and Congress MP Shashi Tharoor
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ Prime Minister Narendra Modi and Congress MP Shashi Tharoor
Published on
ನವದೆಹಲಿ: ಪ್ರಧಾನಿಯ ಭಾಷಣವು ಆರ್ಥಿಕ ದೃಷ್ಟಿಕೋನ ಮತ್ತು ಸಾಂಸ್ಕೃತಿಕವಾಗಿತ್ತು. ಅಲ್ಲದೆ, ದೇಶದ ಪ್ರಗತಿಗಾಗಿ ಸದಾ ಕೆಲಸ ಮಾಡಲು ಪ್ರೋತ್ಸಾಹಿಸುತ್ತಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಮತ್ತೊಮ್ಮೆ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ತರೂರ್​, ನಾನು ತೀವ್ರ ಶೀತ ಮತ್ತು ಕೆಮ್ಮಿನೊಂದಿಗೆ ಹೋರಾಡುತ್ತಿದ್ದರೂ ಪ್ರೇಕ್ಷಕರಲ್ಲಿದ್ದಕ್ಕೆ ಸಂತೋಷವಾಗಿದೆ ಎಂದಿದ್ದಾರೆ. ಅಲ್ಲದೆ, ಭಾರತವು ಈಗ ಜಗತ್ತಿಗೆ ಉದಯೋನ್ಮುಖ ಮಾದರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ದೇಶದ ಆರ್ಥಿಕ ಸ್ಥಿತಿಗತಿ ಮೇಲೆ ಮೋದಿ ಮಾಡಿದ ಭಾಷಣ ಗಮನ ಸೆಳೆಯಿತು ಎಂದು ಪ್ರಧಾನಿಯನ್ನು ಶ್ಲಾಘಿಸಿದ್ದಾರೆ.
ನವೆಂಬರ್ 17ರಂದು ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಆರನೇ ರಾಮನಾಥ ಗೋಯೆಂಕಾ ಉಪನ್ಯಾಸದಲ್ಲಿ ಪ್ರಧಾನಿ ಮೋದಿ ಈ ಹೇಳಿಕೆಗಳನ್ನು ನೀಡಿದರು.

ಪ್ರಧಾನಿ ಮೋದಿ ಬಗ್ಗೆ ತರೂರ್​ ಹೇಳಿದ್ದೇನು..?

ಪ್ರಧಾನಿ ಮೋದಿಯವರ ಭಾಷಣದ ಪ್ರಮುಖ ಭಾಗವು ಮೆಕಾಲೆಯ 200 ವರ್ಷಗಳ ಗುಲಾಮ ಮನಸ್ಥಿತಿಯ ಪರಂಪರೆಯನ್ನು ಉರುಳಿಸಲು ಮೀಸಲಾಗಿತ್ತು. ಅಲ್ಲದೆ, ಮುಂದಿನ ದಿನಗಳಲ್ಲಿ ಭಾರತದ ಪರಂಪರೆ, ಭಾಷೆಗಳು ಮತ್ತು ಜ್ಞಾನ ವ್ಯವಸ್ಥೆಗಳಲ್ಲಿ ಹೆಮ್ಮೆಯನ್ನು ಪುನಃಸ್ಥಾಪಿಸಲು 10 ವರ್ಷಗಳ ರಾಷ್ಟ್ರೀಯ ಧ್ಯೇಯಕ್ಕೆ ಪ್ರಧಾನಿ ಮನವಿ ಮಾಡಿದರು ಎಂದು ತರೂರ್​ ತಿಳಿಸಿದ್ದಾರೆ.
ಅಲ್ಲದೆ, ಮುಂದುವರೆದು ಮಾತನಾಡಿದ ತರೂರ್, ಪ್ರಧಾನಿ ಮೋದಿ ಯಾವಾಗಲೂ ಚುನಾವಣಾ ಮನಸ್ಥಿತಿಯಲ್ಲಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಅವರು ನಿಜವಾಗಿಯೂ ಜನರ ಸಮಸ್ಯೆಗಳನ್ನು ಪರಿಹರಿಸಲು ಭಾವನಾತ್ಮಕ ಮನಸ್ಥಿತಿಯಲ್ಲಿದ್ದಾರೆ ಎಂದು ತಿರುವನಂತಪುರಂ ಸಂಸದ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಆಪರೇಷನ್​ ಸಿಂಧೂರ ನಿಯೋಗದ ನೇತೃತ್ವ ವಹಿಸಿದ್ದ ತರೂರ್
ಕೆಳೆದ ಮೇ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಶಶಿ ತರೂರ್ ಅವರನ್ನು ವಿದೇಶದಲ್ಲಿ ಆಪರೇಷನ್ ಸಿಂದೂರ್ ನಿಯೋಗದ ನೇತೃತ್ವ ವಹಿಸಲು ಆಯ್ಕೆ ಮಾಡಿತ್ತು. ಆದರೆ ಕಾಂಗ್ರೆಸ್​ ಪಕ್ಷವು ತರೂರ್ ಹೆಸರನ್ನು ಶಿಫಾರಸು ಮಾಡಿರಲಿಲ್ಲ.
ಭಾರತಕ್ಕೆ ಹಿಂದಿರುಗಿದ ನಂತರ, ತರೂರ್ ಮತ್ತೊಮ್ಮೆ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ್ದರು. ಅಲ್ಲದೆ, ಪ್ರಧಾನಿಯವರ ಶಕ್ತಿ ಮತ್ತು ಚೈತನ್ಯವನ್ನು ಭಾರತಕ್ಕೆ ಒಂದು ಆಸ್ತಿ ಎಂದು ಬಣ್ಣಿಸಿದರು. ಇದು ಹೆಚ್ಚಿನ ಬೆಂಬಲಕ್ಕೆ ಅರ್ಹವಾಗಿದೆ ಎಂದು ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net