ಶರದ್ ಪವಾರ್ ಆರೋಗ್ಯದಲ್ಲಿ ವ್ಯತ್ಯಯ: ಪುಣೆಯ ರುಬಿ ಹಾಲ್ ಆಸ್ಪತ್ರೆಗೆ ದಾಖಲಾದ ಮಾಜಿ ಸಿಎಂ | Sharad Pawar
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಆರೋಗ್ಯದಲ್ಲಿ ವ್ಯತ್ಯಯ
ಪುಣೆಯ ರುಬಿ ಹಾಲ್ ಆಸ್ಪತ್ರೆಗೆ ದಾಖಲು
ಕೆಮ್ಮು, ಶೀತ ಮತ್ತು ಉಸಿರಾಟದಲ್ಲಿ ತೊಂದರೆಯಾದ ಹಿನ್ನಲೆ ಆಸ್ಪತ್ರೆಗೆ ದಾಖಲಾದ ಶರದ್ ಪವಾರ್
ಮಹಾರಾಷ್ಟ್ರ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ (Sharad Pawar) ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
85 ವರ್ಷದ ಶರದ್ ಪವಾರ್ ಕೆಮ್ಮು, ಶೀತ ಮತ್ತು ಉಸಿರಾಟದಲ್ಲಿ ವೈಪರಿತ್ಯವಾದ ಹಿನ್ನಲೆ ಭಾರಾಮತಿಯಿಂದ ಪುಣೆಯ ರುಬಿ ಹಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶರದ್ ಪವಾರ್ ಜೊತೆ ಹೆಂಡತಿ ಪ್ರತಿಭಾ ಪವಾರ್ ಮತ್ತು ಮಗಳು ಸುಪ್ರೀಯಾ ಸುಳೆ ಇದ್ದಾರೆ ಎಂದು ಹೇಳಲಾಗುತ್ತಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ರುಬಿ ಹಾಲ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪರ್ವೇಜ್ ಗ್ರಾಂಟ್, ಆಸ್ಪತ್ರೆಗೆ ಆಗಮಿಸಿದ ಶರದ್ ಪವಾರ್ ಅವರನ್ನು ನಮ್ಮ ವೈದ್ಯರ ತಂಡ ಪರೀಕ್ಷಿಸುತ್ತಿದ್ದು, ಅವರ ಆರೋಗ್ಯಸ ಸ್ಥಿತಿಯ ಅನುಗುಣವಾಗಿ ಚಿಕಿತ್ಸೆಯನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶರದ್ ಪವಾರ್ ಅವರು 1990 ರ ಸಮಯದಲ್ಲಿ ಬಾಯಿಯ ಕ್ಯಾನ್ಸರ್ಗೆ ತುತ್ತಾಗಿ, ಅಮೆರಿಕ ಮತ್ತು ಭಾರತದ ಆಸ್ಪತ್ರೆಗಳಲ್ಲಿ ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೂ ಶರದ್ ಪವಾರ್ ಇತ್ತೀಚಿನ ತನಕ ಸಾರ್ವಜನಿಕ ಸಭೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು.
ಡಿಸೆಂಬರ್ 12, 2026 ರಂದು ಜನಿಸಿದ ಶರದ್ ಪವಾರ್ ಮಹಾರಾಷ್ಟ್ರದ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಸದ್ಯ ರಾಜ್ಯಸಭೆಯ ಸಂಸದರಾಗಿ ಕಾರ್ಯನಿರ್ವಗಿಸುತ್ತಿದ್ದು, 1967 ರಿಂದ 1991 ರ ವರೆಗೆ ಇವರು ರಾಜ್ಯ ರಾಜಕೀಯದಲ್ಲಿ ಮೇಲ್ಪಂತಿಯ ನಾಯಕರಾಗಿದ್ದರು.
ಶರದ್ ಪವಾರ್ 1978-80, 1988-90, 1990-91 ಮತ್ತು 1993-95 ರಲ್ಲಿ ಅಂದರೆ ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದಾರೆ. ಮಹಾರಾಷ್ಟ್ರ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತ ಸರ್ಕಾರದ ರಕ್ಷಣಾ ಸಚಿವರಾಗಿ ಸಹ ಶರದ್ ಪವಾರ್ ಕಾರ್ಯನಿರ್ವಹಿಸಿದ್ದಾರೆ,(ಏಜನ್ಸೀಸ್).