ಶರದ್ ಪವಾರ್ ಕೋಮುವಾದಿ ಶಕ್ತಿಗಳ ಜೊತೆ ಸೇರಲ್ಲ; ಎರಡೂ ಎನ್​ಸಿಪಿ ಬಣಗಳ ವಿಲೀನ ತಳ್ಳಿ ಹಾಕಿದ ಸಂಜಯ್ ರಾವತ್ | Sanjay Raut

ಮಹಾರಾಷ್ಟ್ರ ರಾಜಕಾರಣದಲ್ಲಿ ಎರಡೂ ಎನ್​ಸಿಪಿ ಬಣಗಳ ವಿಲೀನದ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೂ, ಶರದ್ ಪವಾರ್ ಅವರು ತಮ್ಮ ದಶಕಗಳ ಸುದೀರ್ಘ ರಾಜಕೀಯ ಶ್ರಮವನ್ನು ವ್ಯರ್ಥಗೊಳಿಸಲ್ಲ. ಮತ್ತು ಕೋಮುವಾದಿ ಶಕ್ತಿಗಳ ಜೊತೆ ಸೇರಲ್ಲ ಎಂದು ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್
ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್
Published on: 

ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಎರಡೂ ಎನ್​ಸಿಪಿ ಬಣಗಳ ವಿಲೀನದ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೂ, ಶರದ್ ಪವಾರ್ ಅವರು ತಮ್ಮ ದಶಕಗಳ ಸುದೀರ್ಘ ರಾಜಕೀಯ ಶ್ರಮವನ್ನು ವ್ಯರ್ಥಗೊಳಿಸಲ್ಲ. ಮತ್ತು ಕೋಮುವಾದಿ ಶಕ್ತಿಗಳ ಜೊತೆ ಸೇರಲ್ಲ ಎಂದು ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಮುಂಬೈನಲ್ಲಿ ಸೋಮವಾರ(ನ. 09) ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈ ವಿಷಯದ ಬಗ್ಗೆ ಶರದ್ ಪವಾರ್ ತಮ್ಮ ನಿಲುವನ್ನು ಸ್ಪಷ್ಟಪಡಿಸುವವರೆಗೆ ಕಾಯಬೇಕು. ವಿಲೀನಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಇಲ್ಲ. ಜನವರಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟ ಬಳಿಕ ಎನ್​ಸಿಪಿ ನಾಯಕರಿಲ್ಲದಂತಾಗಿದೆ ಎಂದಿದ್ದಾರೆ.

ಪ್ರಸ್ತುತ ಎನ್‌ಸಿಪಿಯನ್ನು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಮುನ್ನಡೆಸುತ್ತಿದ್ದಾರೆ. ಅಲ್ಲದೆ, ಎನ್‌ಸಿಪಿ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಮುಂದಿನ ನಡೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನಿರ್ಧರಿಸುತ್ತಾರೆ ಎಂದಿದ್ದಾರೆ.

Also Read
ಭೂ ಗ್ಯಾರಂಟಿ ಭಾಗ್ಯ; ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ: ಸಿಎಂ ಡಿ ಕೆ ಶಿವಕುಮಾರ್‌ | CM D K Shivakumar
ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್

ಶರದ್ ಪವಾರ್ ಅವರನ್ನು ತಾನು ಬಹಳ ಹತ್ತಿರದಿಂದ ಬಲ್ಲೆ ಎಂದು ಹೇಳಿದ ರಾವತ್, ವಿಲೀನದ ಕುರಿತಾದ ಈ ಊಹಾಪೋಹಗಳನ್ನು ಕಂಡು ಆ ಹಿರಿಯ ನಾಯಕ ಖಂಡಿತವಾಗಿಯೂ ನಗುತ್ತಿರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಮತ್ತು ಶರದ್ ಪವಾರ್ ಅವರು ಬಿಜೆಪಿ ಜೊತೆ ಕೈಜೋಡಿಸುವ ಮೂಲಕ ಮ್ಮ ದಶಕಗಳ ಸುದೀರ್ಘ ಶ್ರಮವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ಅವರ ಎನ್‌ಸಿಪಿ (ಎಸ್‌ಪಿ) ವಿರೋಧ ಪಕ್ಷಗಳ ಮೈತ್ರಿಕೂಟವಾದ 'ಮಹಾ ವಿಕಾಸ್ ಅಘಾಡಿ'ಯ ಭಾಗವಾಗಿವೆ. ಇನ್ನೊಂದು ಬಣದ ಎನ್‌ಸಿಪಿ (NCP) ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಜೊತೆಗೂ ಮತ್ತು ಮಹಾರಾಷ್ಟ್ರದಲ್ಲಿ 'ಮಹಾಯುತಿ' ಮೈತ್ರಿಕೂಟದೊಂದಿಗೂ ಗುರುತಿಸಿಕೊಂಡಿದೆ (ಏಜೆನ್ಸೀಸ್).