ಶಮಿ-ಸಿರಾಜ್​ ಮುಸ್ಲಿಂ ಎಂಬ ಕಾರಣಕ್ಕೆ ವಿಶ್ವಕಪ್​​ ಪಂದ್ಯಗಳಿಂದ ಹೊರಕ್ಕೆ! ಶಾಸಕ ಮುಫ್ತಿ ಇಸ್ಮಾಯಿಲ್ | T20 World Cup

T20 World Cup
T20 World Cup
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಆಯ್ಕೆಯಲ್ಲಿ ತಾರತಮ್ಯದ ಆರೋಪ: ಮಹಾರಾಷ್ಟ್ರ ರಾಜಕೀಯದಲ್ಲಿ ಕ್ರಿಕೆಟ್ ಕಿಚ್ಚು!
  • ಟೀಮ್ ಇಂಡಿಯಾ ಆಯ್ಕೆಯಲ್ಲಿ ತಾರತಮ್ಯದ ಆರೋಪ: ಮಹಾರಾಷ್ಟ್ರ ರಾಜಕೀಯದಲ್ಲಿ ಕ್ರಿಕೆಟ್ ಕಿಚ್ಚು!
  • ಸೋಲಿಗೆ ಮುಸ್ಲಿಂ ಆಟಗಾರರ ಗೈರೇ ಕಾರಣವೇ? ಎಐಎಂಐಎಂ ಮತ್ತು ಸಮಾಜವಾದಿ ಪಕ್ಷದ ಗಂಭೀರ ಆರೋಪ.
ಮುಂಬೈ: ಟಿ20 ವಿಶ್ವಕಪ್( T20 WorldCup) ಕಣದಲ್ಲಿ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಮಹಾರಾಷ್ಟ್ರ ರಾಜಕೀಯದಲ್ಲಿ ಕ್ರಿಕೆಟ್ ಆಟಗಾರರ ಆಯ್ಕೆಯ ವಿಚಾರ ಹೊಸ ಕಿಚ್ಚು ಹಚ್ಚಿದೆ.
ಹೌದು, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಆಡುವ ಹನ್ನೊಂದರ ಬಳಗದಿಂದ (Playing XI) ಕೈಬಿಟ್ಟಿರುವುದು ಈಗ 'ಹಿಂದೂ-ಮುಸ್ಲಿಂ' ವಿವಾದಕ್ಕೆ ಕಾರಣವಾಗಿದ್ದು, ರಾಜಕೀಯ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಮಾಲೆಗಾಂವ್‌ನ ಎಐಎಂಐಎಂ (AIMIM) ಶಾಸಕ ಮುಫ್ತಿ ಇಸ್ಮಾಯಿಲ್ ಈ ವಿವಾದಕ್ಕೆ ನಾಂದಿ ಹಾಡಿದ್ದಾರೆ. "ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಟೀಮ್ ಇಂಡಿಯಾದಲ್ಲಿ ಪ್ರತಿಭಾವಂತ ಮುಸ್ಲಿಂ ಆಟಗಾರರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಶಮಿ ಮತ್ತು ಸಿರಾಜ್ ಅವರಂತಹ ಆಟಗಾರರನ್ನು ತಂಡದಿಂದ ಹೊರಗಿಟ್ಟಿರುವುದೇ ಮುಖ್ಯ ಕಾರಣ," ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಅಬು ಅಜ್ಮಿ ಕೂಡ ಈ ಧ್ವನಿಗೆ ಸಾಥ್ ನೀಡಿದ್ದು, "ಬಿಜೆಪಿ ಆಡಳಿತದಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯ ನಡೆಯುತ್ತಿದೆ. ಈಗ ಕ್ರಿಕೆಟ್‌ನಲ್ಲೂ ಧರ್ಮದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡುತ್ತಿರುವುದು ದುರದೃಷ್ಟಕರ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರೋಧ ವ್ಯಕ್ತಪಡಿಸಿದ ಎನ್‌ಸಿಪಿ ಮತ್ತು ಕಾಂಗ್ರೆಸ್

ಆದರೆ, ಈ ವಿವಾದಾತ್ಮಕ ಹೇಳಿಕೆಗಳಿಂದ ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ಕಾಂಗ್ರೆಸ್ ಅಂತರ ಕಾಯ್ದುಕೊಂಡಿವೆ. ಎನ್‌ಸಿಪಿ ಶಾಸಕ ಇದ್ರಿಸ್ ನಾಯ್ಕವಾಡಿ ಮಾತನಾಡಿ, "ಕ್ರಿಕೆಟ್‌ನಲ್ಲಿ ಧರ್ಮ ತರುವುದು ತಪ್ಪು. ಮೊಹಮ್ಮದ್ ಅಜರುದ್ದೀನ್ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿಯಂತಹ ಮುಸ್ಲಿಂ ಆಟಗಾರರು ತಂಡವನ್ನು ಮುನ್ನಡೆಸಿದ್ದಾರೆ. ಪ್ರತಿಭೆಯೇ ಇಲ್ಲಿ ಮಾನದಂಡ," ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕ ಅಮೀನ್ ಪಟೇಲ್ ಕೂಡ ಈ ಹೇಳಿಕೆಗಳನ್ನು ಜವಾಬ್ದಾರಿಯುತವಲ್ಲದ ನಡೆ ಎಂದು ಕರೆದಿದ್ದಾರೆ.

ಬಿಜೆಪಿ ಮತ್ತು ಶಿವಸೇನೆ ಕಿಡಿ

ಮಹಾರಾಷ್ಟ್ರ ಸಚಿವ ಭರತ್ ಗೋಗಾವಲೆ ಅವರು ಈ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದು, "ಸಮಾಜದಲ್ಲಿ ಒಡಕು ಮೂಡಿಸಲು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ. ಕ್ರಿಕೆಟ್ ಆಯ್ಕೆಯು ಆಟಗಾರನ ಸಾಮರ್ಥ್ಯದ ಮೇಲೆ ನಡೆಯುತ್ತದೆಯೇ ಹೊರತು ಧರ್ಮದ ಮೇಲಲ್ಲ. ಇಂತಹ ಹೇಳಿಕೆ ನೀಡಿದವರು ಕೂಡಲೇ ಕ್ಷಮೆಯಾಚಿಸಬೇಕು," ಎಂದು ಆಗ್ರಹಿಸಿದ್ದಾರೆ. ಶಾಸಕ ರವಿ ರಾಣಾ ಕೂಡ ಇಂತಹ ರಾಜಕೀಯವನ್ನು ಅಗ್ಗದ ಪ್ರಚಾರದ ತಂತ್ರ ಎಂದು ಬಣ್ಣಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net