ಪ್ರಶಸ್ತಿ ಸ್ವೀಕರಿಸಿದ ನಂತರ, ಶಫಾಲಿ ಮಾತನಾಡಿ, "ನನ್ನ ಮೊದಲ ವಿಶ್ವಕಪ್ ಅನುಭವ ನಿರೀಕ್ಷೆಯಂತೆ ಆರಂಭವಾಗಲಿಲ್ಲ. ಆದರೆ, ಕೊನೆಯಲ್ಲಿ, ನಾನು ನಿರೀಕ್ಷಿಸದ ರೀತಿಯಲ್ಲಿ ಅದು ಅದ್ಭುತವಾಗಿ ಕೊನೆಗೊಂಡಿತು. ಫೈನಲ್‌ನಲ್ಲಿ ತಂಡದ ಗೆಲುವಿನಲ್ಲಿ ಭಾಗವಾಗಲು ನನಗೆ ಅದೃಷ್ಟ ಸಿಕ್ಕಿತು. ನಾನು ಈ ಪ್ರಶಸ್ತಿಯನ್ನು ನನ್ನ ತಂಡದ ಸದಸ್ಯರು, ತರಬೇತುದಾರರು, ಕುಟುಂಬ ಸದಸ್ಯರು ಮತ್ತು ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಅರ್ಪಿಸುತ್ತೇನೆ. ನಾವು ಒಂದು ತಂಡವಾಗಿ ಗೆಲ್ಲುತ್ತೇವೆ, ಒಂದು ತಂಡವಾಗಿ ಸೋಲುತ್ತೇವೆ.. ಈ ಪ್ರಶಸ್ತಿಯೂ ಹಾಗೆಯೇ ಇದೆ." ಎಂದಿದ್ದಾರೆ.