ಭೀಕರ ಬಿರುಗಾಳಿ ಅಬ್ಬರ: ತಗಡಿನ ಶೆಡ್ ಸಮೇತ ಗಾಳಿಯಲ್ಲಿ ಹಾರಿಹೋದ ಯುವಕ; ವಿಡಿಯೋ ವೈರಲ್! Viral Video
ತಗಡಿನ ಸಮೇತ ಹಾರಿ ಹೋದ ಯುವಕ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಗಡಿನ ಸಮೇತ ಹಾರಿ ಹೋದ ಯುವಕ
ಉತ್ತರ ಪ್ರದೇಶದ ಬರೇಲಿಯಲ್ಲಿ ಭೀಕರ ಬಿರುಗಾಳಿ
ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಮೃತರ ಸಂಖ್ಯೆ 90 ಕ್ಕೆ ಏರಿಕೆ
ಬರೇಲಿ: ನಿನ್ನೆ (ಮೇ.13) ರಂದು ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬಿರುಗಾಳಿ ಉಂಟಾದ ಹಿನ್ನಲೆಯಲ್ಲಿ ಸುಮಾರು 90 ಕ್ಕೂ ಅಧಿಕ ಜನ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈಗ ಇದೇ ಬಿರುಗಾಳಿಗೆ ತುತ್ತಾದ ಬರೇಲಿಯ ಯುವಕನೊಬ್ಬನ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (Viral Video) ಆಗುತ್ತಿದ್ದು, ನಿನ್ನೆ ಸಂಭವಿಸಿದ ಬಿರುಗಾಳಿಯ ತೀವ್ರತೆ ಎಷ್ಟಿತೆಂದು ಈ ವಿಡಿಯೋ ನೋಡಿ ಅಂದಾಜಿಸಬಹುದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಬರೇಲಿಯ ಬಮಿಯಾನಾ ಹಳ್ಳಿಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋನಲ್ಲಿ ಯುಕನೊಬ್ಬ ಗಾಳಿ ಜೋರಾಗಿ ಬೀಸುತ್ತಿದ್ದಂತೆ ಹೋಲ್ಡಿಂಗ್ಗಳನ್ನು ನೇತು ಹಾಕುವ ಶೆಡ್ನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಆದರೆ ಗಾಳಿಯ ವೇಗ ಎಷ್ಟಿತೆಂದರೆ, ಯುವಕ ಶೆಡ್ ಸಮೇತ ಹಾರಿ ಹೋಗಿ ಸುಮಾರು 15-20 ಅಡಿಯಿಂದ ಭೂಮಿಗೆ ಅಪ್ಪಳಿಸಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ಯುವಕನನ್ನು ಊರ ನಾಗರಿಕರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆತನ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದಂತೆ ನೆಟ್ಟಿಗರು ತಮ್ಮ ಕೈ ಬೆರಳುಗಳಿಗೆ ಕೆಲಸ ಕೊಟ್ಟಿದ್ದಾರೆ. ನೋಡಿ ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡರೆ, ಹೀಗೆ ಎತ್ತಿ ಬೀಸಾಕುತ್ತದೆ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿದರೆ ಗೊತ್ತಾಗುತ್ತೆ, ಈ ಗಾಳಿಯ ತಾಕತ್ತೇನೆಂದು ಎಂದು ಇನ್ನೊಬ್ಬರು ಹೇಳಿದರೆ, ಈ ಜಗತ್ತಿನಲ್ಲಿ ತಾನೇ ಸರ್ವಶ್ರೇಷ್ಟ ಎಂದು ಮೆರೆಯುವ ಮನಷ್ಯನಿಗೆ ಪ್ರಕೃತಿಯೇ ಪಾಠ ಕಲಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಜನರ ಪ್ರಾಣ ಉಳಿಸುವುದೇ ನಮ್ಮ ಆದ್ಯತೆ: ಸಿಎಂ ಯೋಗಿ
ಮೇ. 13 ರಂದು ರಾಜ್ಯದಲ್ಲಿ ಭೀಕರ ಮಳೆ, ಬಿರುಗಾಳಿಗೆ ತುತ್ತಾಗಿ ಸುಮಾರು 90 ಜನ, ಸಾವನ್ನಪ್ಪಿದ್ದರೆ 53 ಜನ ತೀವ್ರವಾಗಿ ಗಾಯಗೊಂಡಿದ್ದು, 114 ಜಾನುವಾರುಗಳು ಪ್ರಾಣವನ್ನು ಕಳೆದುಕೊಂಡಿದೆ.
ಸಿಎಂ ಯೋಗಿ ಆದಿತ್ಯನಾಥ್, ಕೂಡಲೇ ವಿಪತ್ತಿನಿಂದ ಬಳಲುತ್ತಿರುವ ಜನರ ರಕ್ಷಣೆ ಮಾಡಲಾಗುವುದು. ಅತ್ಯಂತ ಅಪಾಯಕಾರಿ ಸ್ಥಳದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಅಧಿಕಾರಿಗೆ ಸೂಚಿಸಲಾಗಿದೆ.
ಪರಿಸ್ಥಿತಿ ಹಿಡಿತಕ್ಕೆ ಬಂದ ನಂತರ ನಿರಾಶ್ರಿತರಿಗೆ ಮನೆ ಹಾಗೂ ಇತರೆ ಪರಿಹಾರಗಳನ್ನು ಘೋಷಿಸಲಾಗುವುದು. ಜನರ ಪ್ರಾಣವನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್).