ಜಾಗತಿಕ ಶಾಂತಿಗೆ ಭಯೋತ್ಪಾದನೆಯೇ ದೊಡ್ಡ ಹೆಮ್ಮಾರಿ: ಪಾಕಿಸ್ತಾನದ ಕುತಂತ್ರಕ್ಕೆ ವಿಶ್ವಸಂಸ್ಥೆಯಲ್ಲೇ ಚಾಟಿ ಬೀಸಿದ ಜೈಶಂಕರ್! | S Jaishankar

S Jaishankar: ಶನಿವಾರ ವಿಶ್ವಸಂಸ್ಥೆಯ ಮಹಾಸಭೆಯ (UNGA) 81ನೇ ಅಧಿವೇಶನದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಪಾಕಿಸ್ತಾನವು ಭಯೋತ್ಪಾದನೆಯನ್ನು ಸರಣಿಯಾಧಾರಿತವಾಗಿ ಅಭ್ಯಾಸ ಮಾಡುವ ದೇಶ ಎಂದು ಕಿಡಿಕಾರಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್
Published on: 

S Jaishankar: ಶನಿವಾರ ವಿಶ್ವಸಂಸ್ಥೆಯ ಮಹಾಸಭೆಯ (UNGA) 81ನೇ ಅಧಿವೇಶನದಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಪಾಕಿಸ್ತಾನವು ಭಯೋತ್ಪಾದನೆಯನ್ನು ಸರಣಿಯಾಧಾರಿತವಾಗಿ ಅಭ್ಯಾಸ ಮಾಡುವ ದೇಶ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಶುಕ್ರವಾರ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಮಾಡಿದ ಭಾಷಣವನ್ನು ಉಲ್ಲೇಖಿಸಿ, ಪಾಕ್​ ಸಭೆಯ ಮುಂದೆ ಸತ್ಯವನ್ನು ತಿರುಚಿ ಹೇಳಿದೆ ಎಂದು ಟೀಕಿಸಿದ್ದಾರೆ

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನದ ಹೆಸರು ಎತ್ತದೆ ಶಹಬಾಜ್ ಶರೀಫ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಶತ್ರು ರಾಷ್ಟ್ರವು ಭಯೋತ್ಪಾದನೆಯನ್ನು ಸಹಜ ವಿಷಯ ಎಂಬಂತೆ ಬಿಂಬಿಸಲು ಮತ್ತು ಅದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆಕ್ಷೇಪಿಸಿದ ಜೈಶಂಕರ್, ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಂಪೂರ್ಣ ಹಕ್ಕು ಭಾರತಕ್ಕಿದೆ ಎಂದು ಪ್ರತಿಪಾದಿಸಿದರು. ಭಯೋತ್ಪಾದನೆ ಮತ್ತು ಸ್ನೇಹ-ಸೌಹಾರ್ದತೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಮಾತ್ರ ದ್ವಿಪಕ್ಷೀಯ ಬಾಂಧವ್ಯ ಸುಧಾರಿಸಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸುತ್ತಾ, ಜಾಗತಿಕ ಶಾಂತಿಗೆ ನಿರಂತರ ಬೆದರಿಕೆಯಾಗಿರುವುದು ಉಗ್ರವಾದ ಎನ್ನುವ ಹೆಮ್ಮಾರಿ ಎಂದರು.

ಇದನ್ನೂ ಓದಿ:ಭಯೋತ್ಪಾದನೆಗೆ ಮುಂದಾದ್ರೆ ತಕ್ಕ ಪರಿಣಾಮ ಕಟ್ಟಿಟ್ಟ ಬುತ್ತಿ: ಯುಎನ್‌ನಲ್ಲಿ ಪಾಕಿ ಪ್ರಧಾನಿಯ ಬೆವರಿಳಿಸಿದ ಭಾರತೀಯ ನಿಯೋಗದ ಪ್ರಥಮ ಕಾರ್ಯದರ್ಶಿ | Petal Gahlot

ಇದನ್ನು ಗಡಿಯಾಚೆಗಿನ ಉದ್ದೇಶದೊಂದಿಗೆ ಸರ್ಕಾರವೇ ಪ್ರಾಯೋಜಿಸುವುದು ಜಾಗತಿಕ ವ್ಯವಸ್ಥೆಗೆ ಎಸಗುವ ನೇರ ಅಪಮಾನವಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವ ಸರ್ಕಾರಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು. ಭಯೋತ್ಪಾದನೆಯ ವಿರುದ್ಧ ನಮಗಿರುವ ಶೂನ್ಯ ಸಹಿಷ್ಣುತೆ (Zero-tolerance) ನಿಲುವಿನಲ್ಲಿ ಯಾವುದೇ ಸಡಿಲಿಕೆ ಇರಬಾರದು. ವಿಶೇಷವಾಗಿ, ಭಯೋತ್ಪಾದನೆಯ ಆರ್ಥಿಕ ಮೂಲಗಳನ್ನು ಜಗತ್ತಿನೆದುರು ಬಹಿರಂಗಪಡಿಸಿ, ಅದನ್ನು ಮೆಟ್ಟಿಲಿಬೇಕು ಎಂದು ಅವರು ಪ್ರತಿಪಾದಿಸಿದರು.

ಶಹಬಾಜ್ ಶರೀಫ್ ಮತ್ತು ಅಮೆರಿಕ ಪ್ರಸ್ತಾಪ

ಇದಕ್ಕೂ ಮುನ್ನ ಶುಕ್ರವಾರ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್, ಮೇ ತಿಂಗಳಿನಲ್ಲಿ ನಡೆದ ಮಿಲಿಟರಿ ಸಂಘರ್ಷವನ್ನು ನೆನಪಿಸಿಕೊಂಡು, ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಸುಳ್ಳು ನೆಪದಲ್ಲಿ ನಡೆಸಿದ ಬಾಹ್ಯ ಆಕ್ರಮಣ ಎಂದು ಕರೆದರು. ಅಲ್ಲದೆ, ವಿಶ್ವಸಂಸ್ಥೆಯ ಚಾರ್ಟರ್‌ನ ವಿಧಿ 51 ರ ಅಡಿಯಲ್ಲಿ ಪಾಕಿಸ್ತಾನ ಕೈಗೊಂಡ ಕ್ರಮಗಳು ಅದರ ಸ್ವಯಂ ರಕ್ಷಣೆಯ ಕಾನೂನುಬದ್ಧ ಹಕ್ಕಾಗಿದೆ ಎಂದು ಪ್ರತಿಪಾದಿಸಿದ್ದರು.

Also Read
ನಗುವುದೋ ಅಳುವುದೋ ನೀವೇ ಹೇಳಿ!...ಪಾಕಿ ಪ್ರಧಾನಿ ಕಟ್ಟುಕಥೆಗೆ ಭಾರತೀಯ ರಾಯಭಾರಿ ಶ್ರೀನಿವಾಸ್ ರಿಯಾಕ್ಷನ್​ ಹೇಗಿತ್ತು ನೋಡಿ! | R Srinivas Reaction
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್

ಆಪರೇಷನ್ ಸಿಂಧೂರ ಮತ್ತು ಭಾರತದ ಸ್ಪಷ್ಟನೆ

ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ 26 ನಾಗರಿಕರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಕಳೆದ ವರ್ಷ ಮೇ 7 ರಂದು ಭಾರತವು 'ಆಪರೇಷನ್ ಸಿಂಧೂರ್' ಪ್ರಾರಂಭಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿತ್ತು. ಟ್ರಂಪ್ ಮಧ್ಯಸ್ಥಿಕೆಯ ಪ್ರತಿಪಾದನೆಗಳನ್ನು ಭಾರತ ತಳ್ಳಿಹಾಕಿದೆ.

ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ಡೈರೆಕ್ಟರ್ ಜನರಲ್ (DGMO) ಅವರು ಭಾರತೀಯ ಸೇನೆಯ ತಮ್ಮ ಸಹವರ್ತಿಗೆ ಮನವಿ ಮಾಡಿದ ನಂತರವೇ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಭಾರತ ಸ್ಪಷ್ಟಪಡಿಸಿದೆ(ಏಜೆನ್ಸೀಸ್​).

Related Stories

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net