ಇರಾನ್‌ನ ಪ್ರಮುಖ ನಾಯಕರ ಸರಣಿ ಹತ್ಯೆ; ಮೊದಲು ಮತ್ತು ನಂತರ ಎಂಬ ಫೋಟೋ ಹಂಚಿಕೊಂಡ ಇಸ್ರೇಲ್ ಪ್ರಧಾನಿ ನೆತನ್ಯಾಹು | PM Netanyahu
ಪಿಎಂ ನೇತನ್ಯಾಹು ಹಂಚಿಕೊಂಡ ಫೋಟೋ
Published on:
Copied
Follow Us
ಟೆಲ್ ಅವೀವ್: ಇರಾನ್‌ನ ಪ್ರಮುಖ ಸೈನ್ಯಾಧಿಕಾರಿಗಳ ಸರಣಿ ಹತ್ಯೆಯನ್ನು ಸೂಚಿಸುವ ಮೊದಲು ಮತ್ತು ನಂತರ ಎಂಬ ಫೋಟೋವನ್ನು ಮೀಮ್ ಮೂಲಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(PM Benjamin Netanyahu) ಸೋಮವಾರ(ಏ. 06) ಹಂಚಿಕೊಂಡಿದ್ದಾರೆ.
ಯಹೂದಿ ಪರಂಪರೆಯಲ್ಲಿ ಪ್ಯಾಸೋವರ್ ಹಬ್ಬಕ್ಕೆ ಮುಂಚೆ ಎಕ್ಸ್ನಲ್ಲಿ ಮೀಮ್ಸ್ ಮೂಲಕ ಫೋಟೋ ಶೇರ್ ಮಾಡಿ, ಪಾಸೋವರ್ ಶುಚಿಗೊಳಿಸುವಿಕೆಯನ್ನು ಮುಂದುವರಿಸುವುದು-ಇರಾನಿನ ಶತ್ರುವನ್ನು ಪುಡಿಮಾಡುವುದು ಎಂದು ಹಿಬ್ರೂ ಭಾಷೆಯಲ್ಲಿ ಕ್ಯಾಪ್ಷನ್ ನೀಡಿದ್ದಾರೆ.
ಮೊದಲ ಚಿತ್ರದಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಹೈ-ಲೆವಲ್ ನಾಯಕರು ಗ್ರೀನ್ ಮಿಲಿಟರಿ ಯುನಿಫಾರ್ಮ್‌ನಲ್ಲಿ ಒಂದು ಸಭೆಯಲ್ಲಿ ಹಾಜರಾಗಿ ನಿಂತಿದ್ದು, ಹಿಂದೆ ಬ್ಯಾನರ್ನಲ್ಲಿ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಖಾಮೆನಿ ಅವರ ದೊಡ್ಡ ಚಿತ್ರ, ಇರಾನ್ ಧ್ವಜ ಕಾಣುತ್ತವೆ.
ಎರಡನೇ ನಂತರ ಎಂಬ ಚಿತ್ರದಲ್ಲಿ ಅದೇ ಸ್ಥಳದಲ್ಲಿ ಯಾವುದೇ ಐಆರ್ಜಿಸಿ ನಾಯಕರಿಲ್ಲ, ಹಿಂದೆ ಬ್ಯಾನರ್ನಲ್ಲಿ ಅಯತೊಲ್ಲಾ ಅಲಿ ಖಮೇನಿ ಚಿತ್ರವಿಲ್ಲ, ಸ್ಥಳವೆಲ್ಲಾ ಖಾಲಿಯಾಗಿದೆ. ಇದು ಇಸ್ರೇಲ್-ಅಮೆರಿಕ ದಾಳಿಯಲ್ಲಿ ಅವರೆಲ್ಲಾ ಕೊಲ್ಲಲ್ಪಟ್ಟರು ಎಂಬುದನ್ನು ಸೂಚಿಸುವಂತಿದೆ.
ಇನ್ನು ಇರಾನ್ ಜೊತೆ ಯಾವುದೇ ಕದನ ವಿರಾಮ ಮಾಡಿಕೊಳ್ಳದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಬೆಂಜಮಿನ್ ನೆತನ್ಯಾಹು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಸಂಘರ್ಷದ ಈ ಹಂತದಲ್ಲಿ ಕಾರ್ಯತಂತ್ರದ ಅಪಾಯಗಳ ಬಗ್ಗೆ ಎಚ್ಚರಿಸಿದ್ದು, ಅಕಾಲಿಕ ಕದನ ವಿರಾಮವು ಇರಾನ್ಗೆ ಧೈರ್ಯ ತುಂಬಬಹುದು. ನಡೆಯುತ್ತಿರುವ ಮಿಲಿಟರಿ ಒತ್ತಡವನ್ನು ದುರ್ಬಲಗೊಳಿಸಬಹುದು ಎಂದು ಹೇಳಿದ್ದಾರೆ ಎಂದು ಆಕ್ಸಿಯಾಸ್‌ನ ವರದಿ ಮಾಡಿದೆ (ಏಜೆನ್ಸೀಸ್).