ಪ್ರೀತಿಯಲ್ಲಿ ಬಿದ್ದ ಬಳಿಕ, ಉಳಿದ ಜೀವನವನ್ನು ಸಚಿನ್ ಜತೆ ಕಳೆಯಲು ತಮ್ಮ ಮಕ್ಕಳೊಂದಿಗೆ ಸೀಮಾ ಭಾರತಕ್ಕೆ ಬಂದರು. 2023, ಜುಲೈ 3ರಂದು, ಪೊಲೀಸರು ಸೀಮಾ ಮತ್ತು ಸಚಿನ್ ಅವರನ್ನು ಹರಿಯಾಣದ ಬಲ್ಲಭಗಢದಲ್ಲಿ ವಶಕ್ಕೆ ಪಡೆದರು. ನಂತರ, ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು. ಸೀಮಾ ಭಾರತೀಯ ಪೌರತ್ವಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಹಾಗೂ ತನಿಖೆಯಲ್ಲಿ ಇದೆ. ಹೀಗಾಗಿ ಇನ್ನೂ ಆಕೆಗೆ ಪೌರತ್ವ ನೀಡಲಾಗಿಲ್ಲ, (ಏಜೆನ್ಸೀಸ್).