ವಿಜ್ಞಾನ ಪಾಠ ಅಂದ್ರೆ ಹೀಗಿರಬೇಕು!: ಲೇಸರ್ ಮೂಲಕ 'ಲೈಟ್ ರಿಫ್ಲೆಕ್ಷನ್' ಉದಾಹರಣೆ ನೀಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆದ ಶಿಕ್ಷಕಿ! Science Teaching

Science Teaching  ಚಿತ್ರ Instagram
Science Teaching ಚಿತ್ರ Instagram
Published on

ನವದೆಹಲಿ: ತರಗತಿಯಲ್ಲಿ ಶಿಕ್ಷಕರು ಮಾಡುವ ಬೋಧನೆಯನ್ನು ವಿದ್ಯಾರ್ಥಿಗಳು ತಮ್ಮದೇ ಶೈಲಿಯಲ್ಲಿ ವಿಭಿನ್ನವಾಗಿ ಗ್ರಹಿಸುವವರೆಗೆ, ಕೆಲವು ವಿಷಯಗಳು ಎಂದಿಗೂ ಅರ್ಥವಾಗುವುದಿಲ್ಲ ಅಥವಾ ಕಲಿಯಲು ಸಾಧ್ಯವೇ ಇಲ್ಲವೇನೋ ಎಂದೇ ಭಾಸವಾಗುತ್ತದೆ. ಅದರಲ್ಲೂ ವಿಶೇಷವಾಗಿ ವಿಜ್ಞಾನ ಎಂದರೆ ಅನೇಕ ವಿದ್ಯಾರ್ಥಿಗಳಿಗೆ ಕೇವಲ ಕಠಿಣವಾದ ಸಿದ್ಧಾಂತಗಳು, ಅಮೂರ್ತ ತತ್ವಗಳು ಹಾಗೂ ಸಂಕೀರ್ಣವಾದ ರೇಖಾಚಿತ್ರಗಳ (

Science Teaching)

ಸೂತ್ರದಂತೆ ಕಾಣಿಸುತ್ತದೆ. ಇವುಗಳನ್ನು ಕಲ್ಪಿಸಿಕೊಳ್ಳುವುದು ಅಥವಾ ದೃಶ್ಯೀಕರಿಸುವುದು (Visualize) ಸಾಮಾನ್ಯ ವಿದ್ಯಾರ್ಥಿಗಳಿಗೆ ಸವಾಲಿನ ಕೆಲಸ.

ಆದರೆ, ಕಷ್ಟಕರವಾದ ವಿಜ್ಞಾನ ವಿಷಯವನ್ನೂ ಪ್ರತಿಯೊಬ್ಬ ವಿದ್ಯಾರ್ಥಿಗೂ ಸುಲಭವಾಗಿ ಅರ್ಥವಾಗುವಂತೆ ಮಾಡಬಹುದು ಎಂಬುದನ್ನು ಒಬ್ಬ ಸರಳ ಶಿಕ್ಷಕಿ ತಮ್ಮ ವಿಶಿಷ್ಟ ಆಲೋಚನೆ ಹಾಗೂ ತಂತ್ರದ ಮೂಲಕ ಸಾಬೀತುಪಡಿಸಿದ್ದಾರೆ.

ವೈರಲ್ ವೀಡಿಯೊದಲ್ಲೇನಿದೆ?

ಮೇಡಂ, ನಮಗೆ ಹೀಗೆ ಹೇಳಿಕೊಟ್ಟರೆ ಅರ್ಥವಾಗುತ್ತಿಲ್ಲ. ಎಂಬ ವಿದ್ಯಾರ್ಥಿಯ ಮಾತಿನೊಂದಿಗೆ ಈ ವೀಡಿಯೊ ಪ್ರಾರಂಭವಾಗುತ್ತದೆ. ತಕ್ಷಣವೇ ಕಾರ್ಯಪ್ರವೃತ್ತರಾಗುವ ಶಿಕ್ಷಕಿ ನಿಧಿ, ಹಸಿರು ಬಣ್ಣದ ಲೇಸರ್ ಪಾಯಿಂಟರ್, ಸಮತಲ ಕನ್ನಡಿ, ಗ್ಲಾಸ್ ಪ್ರಿಸಂ, ನೀರು ಮತ್ತು ಸಣ್ಣ ಪ್ರಮಾಣದ ಪೌಡರ್ ಬಳಸಿ ಪ್ರಯೋಗ ಆರಂಭಿಸುತ್ತಾರೆ.
ಗಾಳಿಯಲ್ಲಿ ಲೇಸರ್ ಬೆಳಕಿನ ಚಲನೆ ಸ್ಪಷ್ಟವಾಗಿ ಕಾಣಿಸಲು ಅವರು ಪೌಡರ್ ತೂರುತ್ತಾರೆ. ಇದು 'ಟಿಂಡಾಲ್ ಪರಿಣಾಮ'ವನ್ನು ಉಂಟುಮಾಡಿ, ಬೆಳಕಿನ ಕಿರಣವು ಪ್ರಯಾಣಿಸುವ ಹಾದಿಯನ್ನು ಕಣ್ಣಿಗೆ ಕಾಣಿಸುವಂತೆ ಮಾಡುತ್ತದೆ. ನಯವಾದ ಮೇಲ್ಮೈಗೆ ಬೆಳಕು ಬಿದ್ದಾಗ ಅದು ಹೇಗೆ ಮರುಕಳಿಸುತ್ತದೆ (Reflection) ಎಂಬುದನ್ನು ಕನ್ನಡಿ ಬಳಸಿ ಹಾಗೂ ಬೆಳಕು ಒಂದು ಮಾಧ್ಯಮದಿಂದ ಮತ್ತೊಂದಕ್ಕೆ ಪ್ರವೇಶಿಸಿದಾಗ ಹೇಗೆ ತನ್ನ ದಾರಿಯನ್ನು ಬದಲಾಯಿಸುತ್ತದೆ ಎಂಬುದನ್ನು ನೀರು ಮತ್ತು ಗ್ಲಾಸ್ ಪ್ರಿಸಂ ಮೂಲಕ ಪ್ರತ್ಯಕ್ಷವಾಗಿ ತೋರಿಸಿಕೊಡುತ್ತಾರೆ.
ಈ ಪ್ರಾತ್ಯಕ್ಷಿಕೆಯು ವಿದ್ಯಾರ್ಥಿಗಳಿಗೆ ಸುಲಭವಾಗಿ ವಿಷಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಿಧಿ, ಇಂದು, ನಾನು ನನ್ನ ವಿದ್ಯಾರ್ಥಿಗಳಿಗೆ ಬೆಳಕಿನ ಪ್ರತಿಫಲನದ ಪರಿಕಲ್ಪನೆಯನ್ನು ಕಲಿಸಿದೆ ಎಂದು ಬರೆದಿದ್ದಾರೆ. ಲೇಸರ್ ಕಿರಣವು ಗೋಚರಿಸುವಂತೆ ಮಾಡಲು ಈ ಪುಡಿ ಸಗಾಯ ಮಾಡಿತು. ಇದರಿಂದಾಗಿ ವಿದ್ಯಾರ್ಥಿಗಳು ಬೆಳಕಿನ ಪ್ರಯಾಣವನ್ನು ಹೆಚ್ಚು ಸುಲಭವಾಗಿ ಪತ್ತೆಹಚ್ಚಬಹುದು, ಇದು ಪಾಠವನ್ನು ಸಂವಾದಾತ್ಮಕ ಮತ್ತು ಸ್ಮರಣೀಯವಾಗಿಸುತ್ತದೆ ಎಂದಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಈ ಪ್ರಾಯೋಗಿಕ ಪ್ರದರ್ಶನವು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ಅನೇಕರು ತಮ್ಮ ಶಾಲಾ ದಿನಗಳಲ್ಲಿ ಅವರಂತಹ ಶಿಕ್ಷಕರು ಇರಬೇಕೆಂದು ಬಯಸಿದ್ದರೆ, ಇನ್ನೂ ಕೆಲವರು ಯಾವುದೇ AI ಈ ಪ್ರಾಯೋಗಿಕ ಜ್ಞಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ಸಣ್ಣ ವಿಷಯಗಳು ಮುಂಬರುವ ಶಿಕ್ಷಣ ವ್ಯವಸ್ಥೆಯಲ್ಲಿ ನನಗೆ ತುಂಬಾ ನಂಬಿಕೆಯನ್ನುಂಟುಮಾಡುತ್ತವೆ ಎಂದು ಮತ್ತೊಬ್ಬ ವೀಕ್ಷಕರು ಹೇಳಿದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net