ಹೌದು, ಬಡತನ, ಕೌಟುಂಬಿಕ ದೌರ್ಜನ್ಯ ಮತ್ತು ಗಂಡನಿಂದ ಆದ ಅವಮಾನಗಳನ್ನು ಎದುರಿಸಿದ ಸವಿತಾ ಪ್ರಧಾನ್, ಮೊದಲ ಪ್ರಯತ್ನದಲ್ಲೇ 2017ರಲ್ಲಿ Union Public Service Commission (UPSC) ಕ್ಲಿಯರ್ ಮಾಡಿಕೊಂಡು, ಐಎಎಸ್ ಅಧಿಕಾರಿಯಾದರು. ಅವರ ಈ ಅಪ್ರತಿಮ ಸಾಧನೆ, ಇಂದು ಕಷ್ಟ ಎಂದ ಕೂಡಲೇ ಸಾವನ್ನೇ ಆಯ್ಕೆ ಮಾಡಿಕೊಳ್ಳುವ ಸಾವಿರಾರು ಮಹಿಳೆಯರಿಗೆ ದಾರಿದೀಪವಾಗಿದೆ.