ರೋಹಿತ್ ಶರ್ಮಾ ಅವರ ಕೈ ಹಿಡಿದು ಎಳೆದ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸರಿತಾ ಶರ್ಮಾ ಎಂಬ ಮಹಿಳೆ, ತನ್ನ ಕೃತ್ಯಕ್ಕೆ ಕ್ಷಮೆಯಾಚಿಸುವುದರ ಜೊತೆಗೆ ಮಗಳ ಜೀವ ಉಳಿಸಲು ಕಣ್ಣೀರಿಟ್ಟಿದ್ದಾರೆ. ಸರಿತಾ ಅವರ ಪುತ್ರಿ ಅನಿಕಾ ಎಂಬ ಬಾಲಕಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯ ಪ್ರಾಣ ಉಳಿಸಲು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಾದ ವಿಶೇಷ ಇಂಜೆಕ್ಷನ್ ಅಗತ್ಯವಿದೆ. ಇದರ ಬೆಲೆ ಬರೋಬ್ಬರಿ 9 ಕೋಟಿ ರೂಪಾಯಿ. "ನಾವು ಈಗಾಗಲೇ ವಿವಿಧ ಮೂಲಗಳಿಂದ 4.1 ಕೋಟಿ ರೂ. ಸಂಗ್ರಹಿಸಿದ್ದೇವೆ, ಆದರೆ ಮಗಳನ್ನು ಉಳಿಸಲು ಸಮಯ ಮಿಂಚಿ ಹೋಗುತ್ತಿದೆ" ಎಂದು ಆಕೆ ವಿವರಿಸಿದ್ದಾರೆ.