ಸಂತಾನಕುಲಂನಲ್ಲಿ ಜೈರಾಜ್ ಮತ್ತು ಬೆನ್ನಿಕ್ಸ್ ಎಂಬ ತಂದೆ-ಮಗನನ್ನು ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಕಸ್ಟಡಿಗೆ ಪಡೆದ ಪೊಲೀಸ್ ಅಧಿಕಾರಿಗಳು, ತಮ್ಮ ಮಾತಿಗೆ ತಿರುಗೇಳಿದರು ಎಂಬ ಕ್ಷುಲಕ ಕಾರಣಕ್ಕೆ, ಜೈಲಿನೊಳಗೆ ಕಟ್ಟಿಹಾಕಿ, ಮನಬಂದಂತೆ ಥಳಿಸಿದ್ದಲ್ಲದೇ, ಕೋಲು, ಕಬ್ಬಿಣದ ರಾಡ್‌ಗಳಿಂದ ಚಿತ್ರಹಿಂಸೆ ನೀಡಿ, ಅವರ ಕೊಲೆಗೆ ಕಾರಣರಾದರು. ಕಸ್ಟಡಿ ಡೆತ್ ಪ್ರಕರಣವನ್ನು ಮಾಧ್ಯಮಗಳಿಂದ ಮತ್ತು ಜನರಿಂದ ಮುಚ್ಚಿಹಾಕಲು ಪಣತೊಟ್ಟಿದ್ದ 9 ಆರೋಪಿ ಪೊಲೀಸರಿಗೆ ಇದೀಗ ಮರಣದಂಡನೆ ವಿಧಿಸಿದ ಐತಿಹಾಸಿಕ ತೀರ್ಪನ್ನು ಇಡೀ ದೇಶ ಸಂಭ್ರಮಿಸುತ್ತಿರುವಾಗ, ಯಾವ ಮೇಲಾಧಿಕಾರಿಗೂ ಹೆದರದೆ, ದಿಟ್ಟತನದಿಂದ ಸಾಕ್ಷಿ, ಸತ್ಯಾಂಶ ಬಾಯ್ಬಿಟ್ಟ ರೇವತಿಯ ಬಗ್ಗೆ ನಾವಿಲ್ಲಿ ತಿಳಿಯಲೇಬೇಕು.