ಆಗಸ್ಟ್ 15ಕ್ಕೆ ಸೀರೆನೇ ಬೆಸ್ಟ್! ಸ್ವಾತಂತ್ರ್ಯ ದಿನದಂದು ಹೀಗೆ ಸೀರೆಯುಟ್ಟರೆ ಲುಕ್ ಸೂಪರ್ | August 15 Saree Look

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾತಂತ್ರ್ಯ ದಿನಕ್ಕೆ ಸೀರೆ ಯಾಕೆ ಸೂಕ್ತ?
  • ಆಗಸ್ಟ್‌ ತಿಂಗಳ ವಾತಾವರಣಕ್ಕೆ ಕಾಟನ್ ಸೀರೆ ಬೆಸ್ಟ್
  • ಕೇಸರಿ, ಬಿಳಿ, ಹಸಿರು ಬಣ್ಣಗಳ ದೇಶಭಕ್ತಿಯ ಲುಕ್
Independence Day saree: ಆಗಸ್ಟ್ 15 ಎಂದರೆನೇ ಸ್ವಾತಂತ್ರ್ಯ, ದೇಶಭಕ್ತಿಯನ್ನು ಸಂಭ್ರಮಿಸುವ ದಿನ. ಜೊತೆಗೆ ವಿಶೇಷವಾಗಿ ಕಾಣಿಸಿಕೊಳ್ಳುವ ಎನ್ನುವ ಸಡಗರವೂ ಇರುತ್ತದೆ. ಶಾಲೆ, ಕಾಲೇಜು, ಆಫೀಸ್ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋಗುವ ಮಹಿಳೆಯರು ಈ ಸೀರೆಗಳನ್ನು ತೊಟ್ಟುಕೊಂಡರೆ ನೀವೇ ಸೆಂಟರ್ ಆಫ್ ಅಟ್ರಾಕ್ಷನ್..
ಸೀರೆ ಭಾರತೀಯ ಸಂಸ್ಕೃತಿಯ ಪ್ರಮುಖ ಉಡುಗೆಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ದಿನದಂದು ಸೀರೆ ಉಡುವುದು ಸಂಪ್ರದಾಯದ ಜೊತೆಗೆ ದೇಶದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತೆ. ಜತೆಗೆ ಒಂದು ರೀತಿಯ ಫ್ಯಾಷನ್ ಆಗಿಯೂ ಕಾಣಿಸಿಕೊಳ್ಳುತ್ತೆ. ವಿಶೇಷವಾಗಿ ಕಾಟನ್ ಮತ್ತು ಕಾಟನ್ ಸಿಲ್ಕ್ ಸೀರೆಗಳು ಹಗುರವಾಗಿರುವುದರಿಂದ ದಿನವಿಡೀ ಧರಿಸಲು ಆರಾಮದಾಯಕವಾಗಿರುತ್ತವೆ.

ಯಾವ ಸೀರೆ ಬೆಸ್ಟ್?

ಆಗಸ್ಟ್‌ನಲ್ಲಿ ವಾತಾವರಣ ಸಾಮಾನ್ಯವಾಗಿ ತೇವಾಂಶದಿಂದ ಕೂಡಿರುವುದರಿಂದ ಕಾಟನ್, ಲಿನನ್ ಅಥವಾ ಕಾಟನ್ ಸಿಲ್ಕ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಹಗುರವಾಗಿದ್ದು, ಎಷ್ಟು ಹೊತ್ತು ಧರಿಸಿದ್ದರೂ ಅಷ್ಟೊಂದು ಕಿರಿಕಿರಿ ಆಗುವುದಿಲ್ಲ. ಆಫೀಸ್ ಕಾರ್ಯಕ್ರಮಕ್ಕೆ ಹೋಗುತ್ತಿದ್ದರೆ ಸಣ್ಣ ಬಾರ್ಡರ್ ಇರುವ ಲೈಟ್ ಕಾಟನ್ ಸಿಲ್ಕ್ ಸೀರೆ ಚೆನ್ನಾಗಿ ಕಾಣುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ಅಥವಾ ಸ್ವಾತಂತ್ರ್ಯ ದಿನಾಚರಣೆಗೆ ಸ್ವಲ್ಪ ಆಕರ್ಷಕ ಲುಕ್ ಬೇಕಿದ್ದರೆ ತ್ರಿವರ್ಣದ ಸೀರೆ ಅಥವಾ ಎಂಬ್ರಾಯ್ಡರಿ ಇರುವ ಸೀರೆಯನ್ನು ತೊಟ್ಟುಕೊಳ್ಳಬಹುದು.

ಕೇಸರಿ, ಬಿಳಿ, ಹಸಿರು ಬಣ್ಣದ ಕಾಂಬಿನೇಷನ್

ಸ್ವಾತಂತ್ರ್ಯ ದಿನದ ಲುಕ್ ಎಂದಾಕ್ಷಣ ತ್ರಿವರ್ಣ ನೆನಪಾಗುತ್ತೆ. ಹೀಗಾಗಿ ಕೇಸರಿ, ಬಿಳಿ, ಹಸಿರು ಬಣ್ಣಗಳನ್ನು ಸೀರೆಯಲ್ಲಿ ಅಥವಾ ಆಕ್ಸೆಸರೀಸ್‌ನಲ್ಲಿ ಬಳಸಬಹುದು. ಕೇಸರಿ ಬಣ್ಣ ಧೈರ್ಯ ಮತ್ತು ತ್ಯಾಗವನ್ನು, ಬಿಳಿ ಶಾಂತಿ ಮತ್ತು ಸತ್ಯವನ್ನು ಹಾಗೂ ಹಸಿರು ಸಮೃದ್ಧಿಯನ್ನು ಪ್ರತಿನಿಧಿಸುತ್ತವೆ. ಮೂರು ಬಣ್ಣಗಳನ್ನು ಸೀರೆ, ಬ್ಲೌಸ್ ಅಥವಾ ಆಕ್ಸೆಸರೀಸ್‌ನಲ್ಲಿ ಸರಿಯಾಗಿ ಹೊಂದಿಸಿಕೊಂಡರೆ ವಿಶೇಷ ಲುಕ್ ಸಿಗುತ್ತದೆ.

ಲುಕ್ ಸಿಂಪಲ್ ಆಗಿರಲಿ

ಸ್ವಾತಂತ್ರ್ಯ ದಿನದಂದು ಸೀರೆಯ ಜೊತೆ ಹೆಚ್ಚು ಭಾರವಾದ ಆಭರಣಗಳ ಬದಲು ಸರಳ ಆಕ್ಸೆಸರೀಸ್ ಬಳಸಬಹುದು. ತ್ರಿವರ್ಣದ ಬಳೆ, ಬಿಂದಿ ಅಥವಾ ಸಣ್ಣ ಬ್ರೋಚ್‌ಗಳನ್ನು ಸೇರಿಸಿದರೆ ಲುಕ್ ಇನ್ನಷ್ಟು ವಿಶೇಷವಾಗುತ್ತದೆ. ಫುಟ್‌ವೇರ್‌ಗೆ ಕೊಲ್ಹಾಪುರಿ ಅಥವಾ ಜುಟ್ಟಿಯನ್ನು ಬಳಸಬಹುದು. ಕೂದಲಿಗೆ ಹೂವು ಅಥವಾ ತ್ರಿವರ್ಣದ ರಿಬ್ಬನ್ ಬಳಸಿದರೆ ಸಾಂಪ್ರದಾಯಿಕ ಲುಕ್ ಸಿಗುತ್ತದೆ. ಮೇಕಪ್ ಕೂಡ ನ್ಯಾಚುರಲ್ ಆಗಿದ್ದರೆ ಸೀರೆಯ ಲುಕ್ ಇನ್ನಷ್ಟು ಎಲಿಗಂಟ್ ಆಗಿ ಕಾಣುತ್ತದೆ.
ಈ ಸ್ವಾತಂತ್ರ್ಯ ದಿನಕ್ಕೆ ಮಹಿಳೆಯರು ಸಿಂಪಲ್ ಆಗಿ, ಸಾಂಪ್ರದಾಯಿಕವಾಗಿ ಹಾಗೂ ದೇಶಭಕ್ತಿಯ ಟಚ್‌ನೊಂದಿಗೆ ಕಾಣಿಸಿಕೊಳ್ಳಬೇಕೆಂದರೆ ಸೀರೆ ಬೆಸ್ಟ್ ಆಯ್ಕೆ. ವಿಶೇಷವಾಗಿ ತ್ರಿವರ್ಣ ಬಣ್ಣಗಳ ಟಚ್ ಇರುವ ಸೀರೆ ಧರಿಸಿದರೆ ಲುಕ್ ಇನ್ನಷ್ಟು ಆಕರ್ಷಕವಾಗಿರುತ್ತೆ. ಸೂಕ್ತವಾದ ಹೇರ್‌ಸ್ಟೈಲ್‌ ಮಾಡಿಕೊಂಡರೆ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net