ಸಾರಾ ಆಕ್ಸೆಸರೀಸ್ ವಿಚಾರದಲ್ಲೂ ಹೆಚ್ಚು ಜಾಗರೂಕರಾಗಿದ್ದಾರೆ. ಗೋಲುಭಾಯ್ ಬದಾಲಿಯಾ ಡೈಮಂಡ್‌ನ ಸ್ಟೇಟ್‌ಮೆಂಟ್ ಡೈಮಂಡ್ ನೆಕ್ಲೇಸ್ ಹಾಗೂ ಅದಕ್ಕೆ ಹೊಂದುವ ಡೈಮಂಡ್ ಕಫ್ ಧರಿಸಿದ್ದರು. ಅವರ ಮೇಕಪ್ ಕೂಡ ಸಿಂಪಲ್ ಆಗಿತ್ತು. ಮೃದುವಾಗಿ ಹೈಲೈಟ್ ಮಾಡಿದ ಕಣ್ಣುಗಳು, ಶೇಪ್ ಮಾಡಿದ ಹುಬ್ಬುಗಳು, ಗ್ಲೋಯಿಂಗ್ ಸ್ಕಿನ್ ಮತ್ತು ಲೈಟ್ ಪಿಂಕ್ ಲಿಪ್‌ಸ್ಟಿಕ್ ಲುಕ್‌ಗೆ ಇನ್ನಷ್ಟು ಸೊಬಗು ನೀಡಿತ್ತು. ಅವರ ಹೇರ್ ಸ್ಟೈಲ್ ಸಹ ಮತ್ತೊಂದು ಆಕರ್ಷಣೆ ಎನ್ನಬಹುದು. ಮುಖದ ಸುತ್ತ ಕೆಲವು ಕೂದಲಿನ ಎಳೆಗಳನ್ನು ಹಾಗೆಯೇ ಬಿಡಲಾಗಿದ್ದು, ಒಟ್ಟಾರೆ ಈ ಲುಕ್‌ಗೆ ಅದು ಎಲಿಗಂಟ್ ಟಚ್ ನೀಡಿತ್ತು.