ವಿಶೇಷವೆಂದರೆ, ಐಪಿಎಲ್ ಇತಿಹಾಸದ 18 ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಸಿಡಿಸಿದ ಮೊದಲ ಸಿಎಸ್‌ಕೆ ಬ್ಯಾಟರ್ ಎಂಬ ದಾಖಲೆಗೆ ಸಂಜು ಪಾತ್ರರಾದರು. ಈ ಹಿಂದೆ ಸುರೇಶ್ ರೈನಾ, ಧೋನಿ ಅಥವಾ ಗಾಯಕ್ವಾಡ್ ಅವರಿಗೂ ಸಾಧ್ಯವಾಗದ ಸಾಧನೆಯನ್ನು ಸ್ಯಾಮ್ಸನ್ ಈ ಪಂದ್ಯದಲ್ಲಿ ಮಾಡಿ ತೋರಿಸಿದರು. ಇವರ ಶತಕದ ಬಲದಿಂದ ಸಿಎಸ್‌ಕೆ 20 ಓವರ್‌ಗಳಲ್ಲಿ 207/6 ರನ್‌ಗಳ ಬೃಹತ್ ಮೊತ್ತ ಪೇರಿಸಿತು.