ಇನ್ನೂ ಆ್ಯಪ್ ಕಡ್ಡಾಯ ವಿವಾದವಾಗುತ್ತಿದ್ದಂತೆ ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿದ್ದು, ಸಂಚಾರ್ ಸಾಥಿ ಅಪ್ಲಿಕೇಶನ್ ಬಳಸುವುದು ಖಡ್ಡಾಯವಲ್ಲ, ಯಾರಿಗಾದರು ಆ್ಯಪ್ ಬೇಡವಾದರೆ ಡಿಲೀಟ್ ಮಾಡಬಹುದು. ಸೈಬರ್ ವಂಚನೆಯನ್ನು ನಿಗ್ರಹಿಸಲು ವಿನ್ಯಾಸಗೊಳಿಸಲಾಗಿರುವ ಈ ಅಪ್ಲಿಕೇಶನನ್ನು ಎಲ್ಲರಿಗೂ ಪರಿಚಯಿಸುವುದು ನಮ್ಮ ಕರ್ತವ್ಯ, ನಿರ್ದೇಶನದ ಹಿಂದಿನ ಉದ್ದೇಶ. ಅದನ್ನು ಇಟ್ಟುಕೊಳ್ಳಬೇಕೋ, ಬೇಡವೋ ಎನ್ನುವುದು ಬಳಕೆದಾರರು ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.