ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಸಲ್ಮಾನ್ ಮಾತು! ಧುರಂಧರ್' ಯಶಸ್ಸಿನ ಬೆನ್ನಲ್ಲೇ ರಾಜಕೀಯದ ಬಗ್ಗೆ ಭಾಯ್‌ಜಾನ್ ಮಾರ್ಮಿಕ ನುಡಿ! Salman Khan

ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಸಲ್ಮಾನ್ ಮಾತು! ಧುರಂಧರ್' ಯಶಸ್ಸಿನ ಬೆನ್ನಲ್ಲೇ ರಾಜಕೀಯದ ಬಗ್ಗೆ ಭಾಯ್‌ಜಾನ್ ಮಾರ್ಮಿಕ ನುಡಿ!
ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಸಲ್ಮಾನ್ ಮಾತು! ಧುರಂಧರ್' ಯಶಸ್ಸಿನ ಬೆನ್ನಲ್ಲೇ ರಾಜಕೀಯದ ಬಗ್ಗೆ ಭಾಯ್‌ಜಾನ್ ಮಾರ್ಮಿಕ ನುಡಿ!
Published on
ಮುಂಬೈ: ಬಾಲಿವುಡ್ ಚಿತ್ರರಂಗದಲ್ಲಿ ಸದ್ಯ ಸಿದ್ಧಾಂತ ಹಾಗೂ ಸಿನಿಮಾಗಳ ನಡುವಿನ ರಾಜಕೀಯ ಚರ್ಚೆಗಳು ತಾರಕಕ್ಕೇರಿರುವ ಬೆನ್ನಲ್ಲೇ, ನಟ ಸಲ್ಮಾನ್ ಖಾನ್(Salman Khan) ನೀಡಿರುವ ಒಂದು ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಪ್ರಸ್ತುತ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳಿಗೆ ಕೈ ಹಾಕಬೇಕಾದರೆ ಕೇವಲ ಕಥೆ ಅಷ್ಟೇ ಅಲ್ಲ, ರಾಜಕೀಯ ಸರಿತನವೂ ಅತ್ಯಂತ ಅನಿವಾರ್ಯವಾಗಿದೆ ಎಂದು ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋ ಕ್ಲಿಪ್‌ನಲ್ಲಿ ಮಾತನಾಡುತ್ತಾ, ನಿಮಗೆ ಒಂದು ವಿಷಯ ನಿಜವಾಗಿಯೂ ತುಂಬಾ ಇಷ್ಟವಾದರೆ, ನೀವು ಖಂಡಿತವಾಗಿಯೂ ಮುಂದೆ ಹೋಗಿ ಅದನ್ನು ಮಾಡಬೇಕು. ಆದರೆ, ಆ ಪ್ರಕ್ರಿಯೆಯಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ವಿಷಯವು ನೈತಿಕವಾಗಿ, ಧಾರ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಸರಿಯಾಗಿರಬೇಕು. ಅಲ್ಲದೆ, ಈಗಿನ ದಿನಗಳಲ್ಲಿ ರಾಜಕೀಯವಾಗಿಯೂ ಅದು ಸರಿಯಾಗಿರಬೇಕು ಎಂದು ಸಲ್ಮಾನ್ ಖಾನ್ ಅರ್ಥಗರ್ಭಿತ ನಗೆಯೊಂದಿಗೆ ಹೇಳಿದ್ದಾರೆ.

'ಧುರಂಧರ್' ಸಿನಿಮಾದ ವಿವಾದಕ್ಕೆ ಲಿಂಕ್ ಮಾಡಿದ ನೆಟ್ಟಿಗರು!

ಸಲ್ಮಾನ್ ಖಾನ್ ತಮ್ಮ ಇಡೀ ಸಂದರ್ಶನದಲ್ಲಿ ಯಾವುದೇ ನಿರ್ದಿಷ್ಟ ಚಿತ್ರದ ಹೆಸರನ್ನಾಗಲಿ ಅಥವಾ ನಟನ ಹೆಸರನ್ನಾಗಲಿ ಎಲ್ಲೂ ಉಲ್ಲೇಖಿಸಿಲ್ಲ. ಅದರೆ, ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಹೇಳಿಕೆಯನ್ನು ಬಾಲಿವುಡ್‌ನ ಇತ್ತೀಚಿನ ಸಾರ್ವಕಾಲಿಕ ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಆದಿತ್ಯ ಧರ್ ನಿರ್ದೇಶನದ ಹಾಗೂ ರಣವೀರ್ ಸಿಂಗ್ ನಟನೆಯ ಧುರಂಧರ್: ದಿ ರಿವೆಂಜ್ ಚಿತ್ರಕ್ಕೆ ನೇರವಾಗಿ ಲಿಂಕ್ ಮಾಡುತ್ತಿದ್ದಾರೆ. 2026ರ ಅತ್ಯಂತ ಯಶಸ್ವಿ ಕಮರ್ಷಿಯಲ್ ಚಿತ್ರವಾಗಿ ಹೊರಹೊಮ್ಮಿರುವ ಈ ಸಿನಿಮಾದ ಕಥಾಹಂದರ ಮತ್ತು ಅದರ ಹಿಂದಿರುವ ರಾಜಕೀಯ ಸಿದ್ಧಾಂತಗಳ ಕುರಿತು ದೇಶಾದ್ಯಂತ ಭಾರಿ ಸಂವಾದಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲೇ ಸಲ್ಮಾನ್ ರಾಜಕೀಯದ ಮಾತಾಡಿರುವುದು ಬಾಲಿವುಡ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ℹ️

"ನನ್ನ ಇಡೀ ಜೀವನದಲ್ಲಿ ನಾನು ಒಂದೇ ಒಂದು ಸ್ಕ್ರಿಪ್ಟ್ ಕೂಡ ಓದಿಲ್ಲ!
ಇದೇ ಸಂದರ್ಭದಲ್ಲಿ ತಮ್ಮ ಸಿನಿಮಾ ಆಯ್ಕೆಯ ವಿಶಿಷ್ಟ ಪ್ರಕ್ರಿಯೆಯ ಬಗ್ಗೆಯೂ ಸಲ್ಮಾನ್ ಖಾನ್ ಆಸಕ್ತಿದಾಯಕ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನಾನು ನನ್ನ ಇಡೀ ಸಿನಿ ಜರ್ನಿಯಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಪೂರ್ಣ ಪ್ರಮಾಣದ ಸ್ಕ್ರಿಪ್ಟ್ ಅನ್ನು ಖುದ್ದಾಗಿ ಓದಿಲ್ಲ. ಬದಲಿಗೆ, ನಿರ್ದೇಶಕರು ಅಥವಾ ಕಥೆಗಾರರಿಂದ ನೇರವಾಗಿ ಕಥೆಯನ್ನು ಕೇಳಲು ಇಷ್ಟಪಡುತ್ತೇನೆ. ಅದಾದ ನಂತರ ನನ್ನ ತಂದೆ, ಹಿರಿಯ ಬರಹಗಾರ ಸಲೀಂ ಖಾನ್ ಅವರ ನಿರ್ಧಾರದ ಮೇಲೆ ನಾನು ಹೆಚ್ಚು ಅವಲಂಬಿತನಾಗಿರುತ್ತೇನೆ. ಸಿನಿಮಾದ ಪ್ರಮುಖ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಾರೆ ಎಂದು ಸಲ್ಮಾನ್ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಆಗಸ್ಟ್ 2026 ಕ್ಕೆ ಲಡಾಖ್ ಯುದ್ಧದ 'ಮಾತೃಭೂಮಿ' ಸಜ್ಜು!

'ಧುರಂಧರ್' ಚಿತ್ರದ ಯಶಸ್ಸಿನ ನಡುವೆಯೇ ಸಲ್ಮಾನ್ ಖಾನ್ ಅವರ ಮುಂಬರುವ ಬಿಗ್ ಬಜೆಟ್ ದೇಶಭಕ್ತಿಯ ವಾರ್-ಡ್ರಾಮಾ ಸಿನಿಮಾ 'ಮಾತೃಭೂಮಿ' ಮೇಲೆ ಇಡೀ ದೇಶದ ಕಣ್ಣು ಬಿದ್ದಿದೆ. ಈ ಚಿತ್ರಕ್ಕೆ ಈ ಹಿಂದೆ ಬ್ಯಾಟಲ್ ಆಫ್ ಗಲ್ವಾನ್ ಎಂದು ಹೆಸರಿಡಲಾಗಿತ್ತು. 2020 ರಲ್ಲಿ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ನಡುವಿನ ಭೀಕರ ಸಂಘರ್ಷದ ನೈಜ ಘಟನೆಗಳನ್ನು ಆಧರಿಸಿ ಈ ಅದ್ಭುತ ದೇಶಭಕ್ತಿಯ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಸದ್ಯ ಸಿಗುತ್ತಿರುವ ಮಾಹಿತಿಗಳ ಪ್ರಕಾರ, ಈ ಬಹುನಿರೀಕ್ಷಿತ ಚಿತ್ರವು ಆಗಸ್ಟ್ 2026ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲು ಸಿದ್ಧತೆ ನಡೆಸುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net