Salman Khan | ಸಲ್ಮಾನ್ ಖಾನ್ 60ನೇ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್; ಜಿಮ್ ಫೋಟೋಗಳಲ್ಲಿ ಯೂತ್‌ಫುಲ್ ಲುಕ್ ಕೊಟ್ಟ ಸಲ್ಲು

ಸಲ್ಮಾನ್ ಖಾನ್ ತಮ್ಮ 60 ನೇ ಹುಟ್ಟುಹಬ್ಬಕ್ಕೂ ಮುನ್ನ ಜಿಮ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಲ್ಮಾನ್ ಖಾನ್ ತಮ್ಮ 60 ನೇ ಹುಟ್ಟುಹಬ್ಬಕ್ಕೂ ಮುನ್ನ ಜಿಮ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Published on
ಮುಂಬೈ: ಇದೇ ಡಿಸೆಂಬರ್ 27 ರಂದು ಬಾಲಿವುಡ್​ ಸೂಪರ್​ ಸ್ಟಾರ್ ಸಲ್ಮಾನ್ ಖಾನ್(Salman Khan) 60 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅಲ್ಲದೆ, ಮುಂಬರುವ ಹುಟ್ಟುಹಬ್ಬವನ್ನು ಅಭಿಮಾನಿಗಳಿಗೆ ತಮ್ಮ ಟ್ರೇಡ್‌ಮಾರ್ಕ್ ಶೈಲಿಯಲ್ಲಿ ನೆನಪಿಸಿದ್ದಾರೆ. ಸಲ್ಮಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಜಿಮ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಸಲ್ಮಾನ್, ನಾನು 60 ವರ್ಷದವನಾಗಿದ್ದಾಗ ಹೀಗೆ ಕಾಣಬೇಕೆಂದು ನಾನು ಬಯಸುತ್ತೇನೆ! ಇನ್ನು 6 ದಿನಗಳ ನಂತರ ಎಂದು ಬರೆದಿದ್ದಾರೆ. ಈ ಚಿತ್ರಗಳಲ್ಲಿ ನಟ ಕಪ್ಪು ವೆಸ್ಟ್ ಮತ್ತು ನೀಲಿ ಬಣ್ಣದ ಶಾರ್ಟ್ಸ್ ಧರಿಸಿ, ಆತ್ಮವಿಶ್ವಾಸದಿಂದ ತನ್ನ ಸ್ನಾಯುಗಳ ತೋಳುಗಳು ಮತ್ತು ಬಿಗಿಯಾದ ಕಾಲುಗಳನ್ನು ಬಗ್ಗಿಸಿ, ಕ್ಲೀನ್-ಶೇವ್​ ಮಾಡಿದ ನೋಟವನ್ನು ಹೊಂದಿರುವುದನ್ನು ತೋರಿಸಿದ್ದಾರೆ.
ಈ ಪೋಸ್ಟ್​ಗೆ ಅಭಿಮಾನಿಗಳಿಂದ ಶ್ಲಾಘನೆ ಮತ್ತು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಈ ಪೋಟೋಗೆ ಕಾಮೆಂಟ್​ ಮಾಡಿರುವ ಒಬ್ಬ ಅಭಿಮಾನಿ, ಭಾಯ್ ಕಿಲ್ಲಿಂಗ್ ಇಟ್ ದಿಸ್ ಟೈಮ್ ಎಂದು ಬರೆದಿದ್ದಾರೆ. ಅನೇಕರು ಇದೇ ರೀತಿಯ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಈ ಕುತೂಹಲಕಾರಿ ವಿಷಯವೆಂದರೆ, ಇದೇ ವರ್ಷ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಆಮಿರ್ ಖಾನ್ 60 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ, ಈ ಸ್ಟಾರ್ಗಳು ತಮ್ಮ ಹುಟ್ಟುಹಬ್ಬವನ್ನು ವಿಶೇಷ ಚಲನಚಿತ್ರಗಳ ಮರು-ಬಿಡುಗಡೆಗಳೊಂದಿಗೆ ಆಚರಿಸಿಕೊಂಡಿದ್ಧಾರೆ. ಅದರೆ, ಸಲ್ಮಾನ್ ಅವರ ಐತಿಹಾಸಿಕ ಹುಟ್ಟುಹಬ್ಬಕ್ಕೆ ಇಂತಹ ಯಾವುದೇ ಯೋಜನೆಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳು ತಿಳಿದು ಬಂದಿಲ್ಲ.
ಸಲ್ಮಾನ್ ಖಾನ್ ಕೊನೆಯ ಬಾರಿಗೆ ಹಿಟ್ ರಿಯಾಲಿಟಿ ಶೋ ಬಿಗ್ ಬಾಸ್ ನ 19 ನೇ ಸೀಸನ್ ಅನ್ನು ಆಯೋಜಿಸಿದ್ದರು. ಅಲ್ಲಿ ಅವರು ಗೌರವ್ ಖನ್ನಾರನ್ನು ವಿಜೇತರನ್ನಾಗಿ ಘೋಷಿಸಿದ್ದರು. ಸಲ್ಮಾನ್​ ಈಗ ತಮ್ಮ ಮುಂದಿನ ದೊಡ್ಡ ಚಿತ್ರ ಬ್ಯಾಟಲ್ ಆಫ್ ಗಾಲ್ವಾನ್​ಗೆ ಸಜ್ಜಾಗುತ್ತಿದ್ದಾರೆ. ಇದು 2020ರ ಭಾರತ ಮತ್ತು ಚೀನಾ ನಡುವಿನ ಗಾಲ್ವಾನ್ ಕಣಿವೆ ಸಂಘರ್ಷವನ್ನು ಆಧರಿಸಿದ ಕೆಥೆಯನ್ನು ಒಳಗೊಂಡಿರುತ್ತದೆ. ಈ ಚಿತ್ರವನ್ನು ಶೂಟೌಟ್ ಅಟ್ ಲೋಖಂಡ್ವಾಲಾಗೆ ಹೆಸರುವಾಸಿಯಾದ ಅಪೂರ್ವ ಲಖಿಯಾ ನಿರ್ದೇಶಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ಸಲ್ಮಾನ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಯೋಜನೆಯ ದೈಹಿಕ ಕಸಾರತ್ತುಗಳ ಬಗ್ಗೆ ಮಾತನಾಡುತ್ತಾ , ಇದು ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಚಿತ್ರಗಳಲ್ಲಿ ಒಂದಾಗಿದೆ. ಇದು ದೈಹಿಕವಾಗಿ ಬಹಳ ಶ್ರಮವನ್ನು ಬೇಡುತ್ತದೆ. ಪ್ರತಿ ವರ್ಷ, ಪ್ರತಿ ತಿಂಗಳು, ಪ್ರತಿದಿನ ಇದು ಹೆಚ್ಚು ಕಷ್ಟಕರವಾಗುತ್ತಿದೆ. ನಾನು ಈಗ ಈ ಸಿನಿಮಾಕ್ಕೆ ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ. ಈಗ ನಾನು ಓಡುತ್ತಿದ್ದೇನೆ, ಒದೆಯುತ್ತಿದ್ದೇನೆ, ಗುದ್ದುತ್ತಿದ್ದೇನೆ ಮತ್ತು ಇನ್ನೂ ಹೆಚ್ಚಿನದನ್ನು ಮಾಡುತ್ತಿದ್ದೇನೆ. ಈ ಚಿತ್ರವು ಇದನ್ನೇ ಬೇಡುತ್ತದೆ ಎಂದು ಖಾನ್ ತಿಳಿಸಿದ್ದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net