ವಿದ್ಯಾರ್ಥಿಗಳನ್ನು ಯುವ ಭಾರತ ಹಾಗೂ ನಮ್ಮ ಯಶಸ್ಸಿನ ಇಂಧನ ಎಂದು ಬಣ್ಣಿಸಿದ ಸಚಿನ್, ಯುವ ಭಾರತವು ಕನಸುಗಳು ಮತ್ತು ಉತ್ಸಾಹದಿಂದ ತುಂಬಿದೆ. ಅವರು ನಮ್ಮ ಯಶಸ್ಸಿನ ಶಕ್ತಿಯಾಗಿದ್ದಾರೆ. ಪೋಷಕರು, ಶಿಕ್ಷಕರು, ಸ್ನೇಹಿತರು, ಸಂಬಂಧಿಕರು, ಶಾಲೆಗಳು ಹಾಗೂ ಆಡಳಿತಗಾರರು ಸೇರಿದಂತೆ ಸಮಾಜದ ಪ್ರತಿಯೊಬ್ಬರೂ ನಮ್ಮ ಯುವಜನತೆಯನ್ನು ಪ್ರೋತ್ಸಾಹಿಸಲು ತಮ್ಮದೇ ಆದ ಪಾತ್ರ ಮತ್ತು ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಸಚಿನ್ ತಿಳಿಸಿದ್ದಾರೆ.