ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ಮತ್ತೊಬ್ಬ ಮಾಜಿ ಆಡಳಿತಾಧಿಕಾರಿಯನ್ನು ಬಂಧಿಸಿದ ಎಸ್​ಐಟಿ | Arrest

ಶಬರಿಮಲೆ ದೇವಸ್ಥಾನ
ಶಬರಿಮಲೆ ದೇವಸ್ಥಾನ
Published on
ತಿರುವನಂತಪುರಂ: ಕೇರಳದ ಶಬರಿಮಲೆ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳಿಂದ ಚಿನ್ನದ ಲೇಪಿತ ಹಾಳೆಗಳ ಕಳ್ಳತನ ಪ್ರಕರಣದಲ್ಲಿ ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಎಸ್.ಶ್ರೀಕುಮಾರ್ ಅವರನ್ನು ಎಸ್​ಐಟಿ ಬಂಧಿಸಿದೆ(Arrest) ಎಂದು(ಡಿ. 17) ವರದಿಯಾಗಿದೆ.
ಕಳ್ಳತನ ನಡೆದಾಗ ಆಡಳಿತ ಅಧಿಕಾರಿಯಾಗಿದ್ದ ಶ್ರೀಕುಮಾರ್, ಈ ಹಿಂದೆ ಬಂಧಿಸದಂತೆ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ ಅವರ ಜಾಮೀನು ಅರ್ಜಿಯನ್ನು ಸದ್ಯ ಹೈಕೋರ್ಟ್ ವಜಾಗೊಳಿಸಿದ ಬಳಿಕ ಅವರನ್ನು ಎಸ್​ಐಟಿ ಕಚೇರಿಗೆ ಕರೆಸಿಕೊಂಡು ಬಂಧಿಸಿದೆ ಎನ್ನಲಾಗಿದೆ.
ಚಿನ್ನ ಕಳ್ಳತನ ಪ್ರಕರಣದಲ್ಲಿ ಇದು ಏಳನೇ ಬಂಧನವಾಗಿದೆ. ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಟಿಡಿಬಿಯ ಮಾಜಿ ಮುಖ್ಯಸ್ಥ ಕೆ. ಪದ್ಮಕುಮಾರ್ ಅವರನ್ನು ಬಂಧಿಸಲಾಗಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net