ರಿಯಾನ್ ಪರಾಗ್ ಬ್ಯಾಟಿಂಗ್ ಅರ್ಭಟ​; ಡೆಲ್ಲಿ ತಂಡಕ್ಕೆ 226 ರನ್​ಗಳ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್​​ | RR vs DC

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
RR vs DC: ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದ​ ವಿರುದ್ಧದ ಪಂದ್ಯದಲ್ಲಿ ರಿಯಾನ್ ಪರಾಗ್ ಮತ್ತು ಜುರೆಲ್ ಭರ್ಜರಿ ಬ್ಯಾಟಿಂಗ್​ನಿಂದ ರಾಜಸ್ಥಾನ್ ರಾಯಲ್ಸ್​ 20 ಓವರ್​ಗಳಲ್ಲಿ 225ರನ್​ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ತಾನ್​ ರಾಯಲ್ಸ್ ತಂಡ, ಮೊದಲ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಎರಡನೇ ಓವರ್​ನಲ್ಲಿ ವೈಭವ್ ಸೂರ್ಯವಂಶಿ ಅವರ ವಿಕೆಟ್​ನಿಂದ ಆಘಾತ ಎದುರಿಸಿತು. ಬಳಿಕ ರಿಯಾನ್ ಪರಾಗ್ ಮತ್ತು ಜುರೆಲ್ ಅವರ 102 ರನ್​ಗಳ ಅದ್ಭುತ ಜೊತೆಯಾಟದಿಂದ ತಂಡ ಬೃಹತ್ ಮೊತ್ತ ಕಲೆ ಹಾಕಲು ಸಹಾಯ ಮಾಡಿತು.
ರಿಯಾನ್ ಪರಾಗ್ 50 ಎಸೆತಗಳಲ್ಲಿ 90 ರನ್ ಗಳಿಸಿದ್ರೆ, ಧ್ರುವ್ ಜುರೆಲ್ 30 ಎಸೆತಗಳಲ್ಲಿ 42 ರನ್​ಗಳಿಸಿದ್ರೆ, ಕೊನೆಯಾದಾಗಿ ಡೊನೊವನ್ ಫೆರೀರಾ 14 ಎಸೆತಗಳಲ್ಲಿ 47 ರನ್ ಗಳಿಸಿ ಅಜೆಯರಾದರು.
ಡೆಲ್ಲಿ ಪರ ಮೊದಲ ಓವರ್ ಬೌಲ್ ಮಾಡಿದ ಮಿಚೆಲ್ ಸ್ಟಾರ್ಕ್, ಟೂರ್ನಿಯಲ್ಲಿ ಉತ್ತಮ ಫಾರ್ಮ್​ನಲ್ಲಿರುವ ಯಶಸ್ವಿ ಜೈಸ್ವಾಲ್​ರನ್ನ ಮೂರೇ ಎಸೆತಗಳಲ್ಲಿ ಔಟ್ ಮಾಡಿದರು. ಸ್ಟಾರ್ಕ್ ಅವರ ಮೊದಲ ಎಸೆತವನ್ನು ಸಿಕ್ಸರ್‌ಗೆ ಕಳುಹಿಸಿದ ಜೈಸ್ವಾಲ್​ ನಂತರ, ಆ ಓವರ್‌ನ ಮೂರನೇ ಎಸೆತದಲ್ಲಿ ಸ್ಟಾರ್ಕ್​ಗೆ ಕ್ಯಾಚ್ ನೀಡಿ ಔಟ್ ಆದರು.
ಎರಡನೇ ಓವರ್​ನಲ್ಲೊ ಕೈಲ್ ಜೇಮಿಸನ್ ಬೌಲಿಂಗ್​ ಮಾಡಿದ್ದು, ಮೊದಲ ಮೂರು ಎಸೆತಗಳನ್ನ ಜುರೆಲ್ ಆಡಿದ್ರೆ, 4ನೇ ಎಸೆತದಲ್ಲಿ ವೈಭವ್ ಸೂರ್ಯವಂಶಿಗೆ ಸ್ಟ್ರೈಕ್ ನೀಡಿದರು. ಆ ಎಸೆತದಲ್ಲಿ ಸೂರ್ಯವಂಶಿ ಬೌಂಡರಿ ಬಾರಿಸಿದ್ದು, ನಂತರದ ಎಸೆತದಲ್ಲೇ ಬೌಲ್ಡ್ ಆದರು. ಸೂರ್ಯವಂಶಿ ವಿಕೆಟ್ ಪಡೆದ ನಂತರ ಜೇಮಿಸನ್, ವೈಭವ್ ಬಳಿ ಬಂದ ಸಂಭ್ರಮಾಚರಣೆ ನಡೆಸಿದರು. ವೈಭವ್ ಮುಂದೆ ಚಪ್ಪಾಳೆ ತಟ್ಟುತ್ತಾ ಆಕ್ರೋಶಭರಿತವಾಗಿ ಅಗಲವಾದ ಕಣ್ಣುಗಳಿಂದ ತೋರಿಸಿದರು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net