ಮೊದಲ ಬಾರಿ ಫೋನ್ ಸೌಂಡ್ ಬಂದಾಗ ಶಾಂತವಾಗಿಯೇ ಪ್ರತಿಕ್ರಿಯಿಸಿದ ಲಾವ್ರೊವ್, ದಯವಿಟ್ಟು ನೀವು ಅಥವಾ ನಿಮ್ಮ ಫೋನ್ ಈ ಕೊಠಡಿಯಿಂದ ಹೊರಗೆ ಹೋಗಿ ಎಂದರು. ಆದರೆ ಕೆಲವೇ ಕ್ಷಣಗಳಲ್ಲಿ ಮತ್ತೆ ಅದೇ ರೀತಿ ಅಡಚಣೆ ಉಂಟಾದಾಗ ರೊಚ್ಚಿಗೆದ್ದ ರಷ್ಯಾ ವಿದೇಶಾಂಗ ಸಚಿವ, ನೀವು ಇಲ್ಲಿಂದ ಹೊರಹೋಗುತ್ತೀರಾ, ನಾನು ತಮಾಷೆ ಮಾಡುತ್ತಿಲ್ಲ. ನೀವೀಗ ನಿಮ್ಮ ಫೋನ್ ಅನ್ನು ಸರೆಂಡರ್ ಮಾಡದಿದ್ದರೆ, ಇಲ್ಲಿರೋ ಸೆಕ್ಯೂರಿಟಿ ಗನ್ ಹೊರಗೆ ತೆಗೆಯಬೇಕಾಗುತ್ತದೆ ಎಂದು ತಮ್ಮದೇ ಆದ ಕಟು ಹಾಸ್ಯ ಮಿಶ್ರಿತ ಧ್ವನಿಯಲ್ಲಿ ವಾರ್ನಿಂಗ್ ನೀಡಿದ್ದಾರೆ.