95ರ ಗಡಿ ದಾಟಿದ ರೂಪಾಯಿ ಮೌಲ್ಯ

ರೂಪಾಯಿ ಮೌಲ್ಯ
ರೂಪಾಯಿ ಮೌಲ್ಯ
Published on

ಮುಂಬೈ: ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರದ ವಹಿವಾಟಿನಲ್ಲಿ ಮೊದಲ ಬಾರಿಗೆ 95 ರೂ. ಗಡಿ ದಾಟುವ ಮೂಲಕ ಸಾರ್ವಕಾಲಿಕ ಕುಸಿತ ಕಂಡಿದೆ. 

ದಿನದ ಅಂತ್ಯಕ್ಕೆ ಸ್ವಲ್ಪ ಚೇತರಿಸಿಕೊಂಡು 94.78 ರೂ.ನಲ್ಲಿ ಸ್ಥಿರವಾಯಿತಾದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟಾರೆ ಶೇ. 9.88ರಷ್ಟು ಕುಸಿತ ದಾಖಲಿಸಿದೆ. ಇದು 2011-12ರ ನಂತರದ ಅತಿ ದೊಡ್ಡ ವಾರ್ಷಿಕ ಕುಸಿತವಾಗಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಹೂಡಿಕೆದಾರರು ಡಾಲರ್​ನಂತಹ ಸುರಕ್ಷಿತ ಆಸ್ತಿಗಳತ್ತ ವಾಲುತ್ತಿರುವುದು ಈ ಅಸ್ಥಿರತೆಗೆ ಕಾರಣವಾಗಿದೆ. 

ರೂಪಾಯಿ ಕುಸಿತ ತಡೆಯಲು ಆರ್ಬಿಐ ಕ್ರಮ ಕೈಗೊಂಡಿದ್ದರೂ, ತೈಲ ಕಂಪನಿಗಳಿಂದ ಡಾಲರ್ಗೆ ಇರುವ ಭಾರಿ ಬೇಡಿಕೆ ರೂಪಾಯಿ ಮೌಲ್ಯದ ಮೇಲೆ ಒತ್ತಡ ಹೇರುತ್ತಿದೆ. ಮುಂದಿನ ದಿನಗಳಲ್ಲಿ ರೂಪಾಯಿ ಮೌಲ್ಯ 92ರಿಂದ 97 ರೂ. ಆಸುಪಾಸಿನಲ್ಲಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net