ಗ್ಯಾಸ್ ಸಿಲಿಂಡರ್ ಅಭಾವದ ವದಂತಿ: ಇಸ್ತ್ರಿ ಪೆಟ್ಟಿಗೆಯಲ್ಲಿ ಚಪಾತಿ ಬೇಯಿಸಿದ ವಿಡಿಯೋ ವೈರಲ್​| Viral Video

ಇಸ್ತ್ರಿ ಪೆಟ್ಟಿಗೆ ಮೇಲೆ ರೊಟ್ಟಿ ಮಾಡುತ್ತಿರುವ ವ್ಯಕ್ತಿ
ಇಸ್ತ್ರಿ ಪೆಟ್ಟಿಗೆ ಮೇಲೆ ರೊಟ್ಟಿ ಮಾಡುತ್ತಿರುವ ವ್ಯಕ್ತಿ
Published on

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಇಂಧನ ಅಭಾವದ ವದಂತಿ
  • ವಿದ್ಯುತ್ ಇಸ್ತ್ರಿ ಪೆಟ್ಟಿಗೆ ಬಳಸಿ ರೊಟ್ಟಿ ವ್ಯಕ್ತಿ
  • ಸಾಮಾಜಿಕ ಮಾಧ್ಯ,ದಲ್ಲಿ ವಿಡಿಯೋ ವೈರಲ್​
ಸಾಮಾಜಿಕ ಜಾಲತಾಣ: ಸದ್ಯ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಭಾರತದಲ್ಲಿ ಇಂಧನದ ಅಭಾವ ಉಂಟಾಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ವದಂತಿಗಳಿಗೆ ಕಿವಿಗೊಡಬೇಡಿ, ಭಾರತಕ್ಕೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.
ಆದರೆ ಜನರು ನಿಖರ ಮಾಹಿತಿಗಳಿಗಿಂತ ವದಂತಿಗಳಿಗೆ ಹೆಚ್ಚಿನ ಮಹತ್ವ ಕೊಡುವ ಕಾರಣ, ಗ್ಯಾಸ್​ ಸಿಲಿಂಡರ್​ ನಾಳೆಯಿಂದ ಬಂದ್​ ಆದರೆ ಏನು ಮಾಡುವುದು ಎಂದು ಈಗಲೇ ಯೋಜನೆ ರೂಪಿಸಲು ಪ್ರಾರಂಭಿಸಿದ್ದಾರೆ.
ಭಾರತೀಯರು ತಮ್ಮ ತ್ವರಿತ ಉಪಾಯ (ಜುಗಾಡ್​) ಕ್ಕೆ ಜಗತ್ತಿನಾದ್ಯಂತ ಖ್ಯಾತರಾಗಿದ್ದು, ಇದಕ್ಕೆ ಸಾಕ್ಷ ಎಂಬಂತೆ ಒಬ್ಬ ವ್ಯಕ್ತಿ ಸಿಲಿಂಡರ್​ನ್ನು ಬಳಸದೆ ಹೇಗೆ ಚಪಾತಿ ಮಾಡುವುದು ಎಂದು ತೋರಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್​ (Viral Video) ಆಗುತ್ತಿದೆ.
ರೊಟ್ಟಿ ಮಾಡಲು ಗ್ಯಾಸ್ ಏಕೆ?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ರೊಟ್ಟಿ ಮಾಡಲು ತಯಾರಿ ನಡೆಸುತ್ತಾನೆ. ಮೊದಲಿಗೆ ಹಿಟ್ಟಿನ ಉಂಡೆಯನ್ನು ಲಟ್ಟಿಸಿ ರೊಟ್ಟಿ ಆಕಾರಕ್ಕೆ ತರುತ್ತಾನೆ. ನಂತರ ಗ್ಯಾಸ್ ಸ್ಟೌವ್ ಹುಡುಕುವ ಬದಲು ನೇರವಾಗಿ ತನ್ನ ಮನೆಯಲ್ಲಿದ್ದ ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆಯನ್ನು ತೆಗೆದುಕೊಂಡು ಕರೆಂಟ್‌ಗೆ ಕನೆಕ್ಟ್ ಮಾಡ್ತಾನೆ. ಇಸ್ತ್ರಿ ಪೆಟ್ಟಿಗೆ ಚೆನ್ನಾಗಿ ಬಿಸಿಯಾದ ಮೇಲೆ, ಅದರ ಮೇಲೆ ರೊಟ್ಟಿಯನ್ನು ಇಟ್ಟು ಬೇಯಿಸಲು ಶುರು ಮಾಡ್ತಾನೆ.
ಪ್ಯಾನ್ ಅಥವಾ ಸ್ಟೌವ್ ಇಲ್ಲದಿದ್ದರೂ, ಆ ಇಸ್ತ್ರಿ ಪೆಟ್ಟಿಗೆಯ ಬಿಸಿಗೆ ರೊಟ್ಟಿ ನಿಧಾನವಾಗಿ ಉಬ್ಬುತ್ತಾ, ಅಚ್ಚುಕಟ್ಟಾಗಿ ಬೇಯುವುದನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಈ ವಿಚಿತ್ರ ದೃಶ್ಯವನ್ನು @Shoonya_ydv ಎಂಬುವವರು ಎಕ್ಸ್ (ಟ್ವಿಟರ್)ನಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ನೆಟ್ಟಿಗರ ಪ್ರತಿಕ್ರಿಯೆ: ಕೆಲವರು ತಮಾಷೆ, ಇನ್ನು ಕೆಲವರ ಆತಂಕ!

ಈ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, ಈ ಪ್ರತಿಭೆ ಭಾರತವನ್ನು ಬಿಟ್ಟು ಹೋಗಬಾರದು ಎಂದು ತಮಾಷೆಯಾಗಿ ಬರೆದರೆ, ಮತ್ತೊಬ್ಬರು ಅಮೆರಿಕಾದವರು ಇದನ್ನ ನೋಡಿ ಶಾಕ್ ಆಗಿರುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಆದರೆ, ಕೆಲವರು ಈ ಸಾಹಸವನ್ನು ನೋಡಿ ಆತಂಕ ವ್ಯಕ್ತಪಡಿಸುತ್ತಾ, ಇದು ನೋಡಲು ತಮಾಶೆಯಾಗಿ ಕಂಡರೂ, ತುಂಬಾ ಅಪಾಯಕಾರಿ. ಇಸ್ತ್ರಿ ಪೆಟ್ಟಿಗೆಯನ್ನು ರೊಟ್ಟಿ ತಯಾರಿಸಲು ಬಳಸುವುದು ವಿದ್ಯುತ್ ಅವಘಡಗಳಿಗೆ ಕಾರಣವಾಗಬಹುದು. ದಯವಿಟ್ಟು ಯಾರೂ ಮನೆಯಲ್ಲಿ ಇದನ್ನು ಟ್ರೈ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ, ಗ್ಯಾಸ್ ಸಿಲಿಂಡರ್ ಕೊರತೆ ಅಥವಾ ಸ್ಟೌವ್ ಕೆಟ್ಟಿರಲಿ, ಭಾರತೀಯರ ಜುಗಾಡ್​ ಮಾತ್ರ ನಿಲ್ಲಲ್ಲ ಎನ್ನುವುದಕ್ಕೆ ಈ ವಿಡಿಯೋ ಒಂದು ಉತ್ತಮ ನಿದರ್ಶನ. ಆದರೆ ರೊಟ್ಟಿ ತಿನ್ನೋ ಆಸೆಯಲ್ಲಿ ಕರೆಂಟ್ ಶಾಕ್ ತಗುಲಿಸಿಕೊಂಡಿರಿ ಎನ್ನುವುದು ನೆಟ್ಟಿಗರ ಅಂಬೋಣವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net