ನೆಟ್ಟಿಗರು ಹಂಚಿಕೊಂಡಿರುವ ಫೀಸ್ ಸ್ಟ್ರಕ್ಚರ್ ನೋಡಿದರೆ ಸಾಮಾನ್ಯ ಮನುಷ್ಯನಿಗೆ ತಲೆ ತಿರುಗುವುದು ಗ್ಯಾರಂಟಿಯಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಐಸಿಎಸ್ಇ ಶಾಲೆಯೊಂದರಲ್ಲಿ ಯುಕೆಜಿ ಅಡ್ಮಿಷನ್ಗೆ ಬರೋಬ್ಬರಿ 1,62,000 ಕೇಳುತ್ತಿದ್ದಾರಂತೆ. ಗುರುಗ್ರಾಮ್ನ ಶಾಲೆಗಳಲ್ಲಿ ತಿಂಗಳಿಗೆ 15,000 ದಿಂದ 20,000 ನ್ನು ಟ್ಯೂಷನ್ ಫೀಸ್ ರೀತಿಯಲ್ಲಿ ಪಾವತಿಸಬೇಕಂತೆ. ಉಳಿದಂತೆ ಅಡ್ಮಿಷನ್, ಸೆಕ್ಯೂರಿಟಿ ಡೆಪಾಸಿಟ್ ಎಲ್ಲ ಸೇರಿದರೆ ವರ್ಷಕ್ಕೆ ಮಗುವಿಗೆ 3 ರಿಂದ 4 ಲಕ್ಷ ರೂಪಾಯಿ ಖರ್ಚಾಗುತ್ತಿದೆ ಎಂದು ಪಾಲಕರೊಬ್ಬರು ಹೇಳಿದ್ದಾರೆ. ಹೈದರಾಬಾದ್ನ ಒಂದು ಶಾಲೆಯೊಂದರ ಒಂದನೇ ತರಗತಿ ಮಗುವಿನ ವಾರ್ಷಿಕ ಫೀಸ್ ಪುಸ್ತಕ, ಯೂನಿಫಾರ್ಮ್ ಮತ್ತು ಟ್ರಾನ್ಸ್ಪೋರ್ಟ್ ವೆಚ್ಚ ಬಿಟ್ಟು, 1.6 ಲಕ್ಷ ರೂಪಾಯಿಯಂತೆ.