ಉದಯಪುರದ ಭೂಪಾಲ್‌ಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಶ್ವೇತಾಂಬರಿ ಭಟ್ ಹೆಸರಿನಲ್ಲಿ ಕಂಪನಿ ರಿಜಿಸ್ಟರ್ ಮಾಡಿ, ನಕಲಿ ಬಿಲ್‌ಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆ ಮುಂಬೈನಲ್ಲಿ ಬಂಧನ ಮಾಡಿದ್ದ ಪೊಲೀಸರು ಉದಯಪುರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಡಿ.9ಕ್ಕೆ ಕೋರ್ಟ್ 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇದೀಗ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ,(ಏಜೆನ್ಸೀಸ್).