ಬಂಗಾಳದ ಶಾಲೆಯೊಂದರಲ್ಲಿ ಸಿಕ್ತು ಕಾಂಡೋಮ್ಸ್​, 1 ಕೋಟಿ ರೂ. ನಗದು ಹಣ; ಮೂವರ ಬಂಧನ..West Bengal School

Rs 1.77 crore, condoms  recovered  school in Bengal
Rs 1.77 crore, condoms recovered school in Bengal
Published on
ಕೋಲ್ಕತ್ತಾ:  ಇತ್ತೀಚೆಗೆ ಬಂಗಾಳದ ಪ್ರತಿಷ್ಠಿತ ಕಾಲೇಜು ಸುರೇಂದ್ರ ನಾಥ ಕ್ಯಾಂಪಸ್​​ನ ಯೂನಿಯನ್​ ಕಚೇರಿಯಲ್ಲಿ ಗನ್​ ಸೇರಿದಂತೆ ಗೆದ್ದಲು ಹಿಡಿದ ಕೋಟಿಗೂ ಹೆಚ್ಚು ಹಣ ಪತ್ತೆಯಾಗಿತ್ತು.  ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ  ಕಾಂಚ್ರಾಪಾರಾದ ಇಂಗ್ಲಿಷ್​ ಮಾಧ್ಯಮ ಶಾಲೆಯಲ್ಲಿ  ನಡೆದಿದೆ. ಇಲ್ಲಿನ ಅಕೌಂಟ್ಸ್​ ಕಚೇರಿಯಲ್ಲಿ ಒಂದು ಕೋಟಿ  ಸಿದಿಕ್ಕಿದ್ದರೆ , ಎಸಿ ರೂಂನಲ್ಲಿ ಬೆಡ್​ ಹಾಗೂ ಕಾಂಡೋಮ್ಸ್ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಜೊತೆಗೆ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 
ಅಕ್ರಮ ಹಣ ಜಮೆ ಮತ್ತು ಅನೈತಿಕ ಚಟುವಟಿಕೆ ನಡೆಸುತ್ತಿರುವ ಆರೋಪದ ಮೇಲೆ ಬಿಜೆಪಿ ಶಾಸಕ ಸಂದೀಪ್​ ದಾಸ್​ ಅವರು ಹಾಗೂ ಪೊಲೀಸರು ಜಂಟಿಯಾಗಿ ಬುಧವಾರ ರಾತ್ರಿ ದಾಳಿ ನಡೆಸಿದರು. ಈ ವೇಳೆ ಶಾಲೆಯ ವಿವೀಧ ಕೊಠಡಿಯಲ್ಲಿ  ಅಪಾರ ಪ್ರಮಾಣದ ಕಾಂಡೋಮ್ ಹಾಗೂ ಹಣ ಪತ್ತೆಯಾಗಿದೆ ಎನ್ನಲಾಗಿದೆ. 

ಕಾಂಡೋಮ್​, ಕಂತೆ ಕಂತೆ ಹಣ ಪತ್ತೆ

ಶಾಲೆಯ ಅಕೌಂಟ್ಸ್​ ಕಚೇರಿ ಪರಿಶೀಲಿಸಿದಾಗ ಪೊಲೀಸರಿಗೆ 1.77 ಕೋಟಿ  ನಗದು ರೂಪಾಯಿ ಸಿಕ್ಕಿದೆ. 500, 200 ಹಾಗೂ 100ರ ಮುಖಬೆಲೆಯ ಕಂತೆ ಕಂತೆ ನೋಟನ್ನು ಬುಧವಾರ ರಾತ್ರಿಯಿಂದ ಮುಂಜಾನೆ ಆರರವರೆಗೂ  ಯಂತ್ರಗಳ ಮುಖೇನ ಎಣಿಸಲಾಗೊದ್ದು, ಈ ಸಂಬಂಧ ಮೂವರು ಉದ್ಯೋಗಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಚೇರಿಯ  ಪಕ್ಕದಲ್ಲೇ ಇದ್ದ ಎಸಿ ವ್ಯವಸ್ಥಿತ ಮಲಗುವ ಕೋಣೆಯಲ್ಲಿ ಅಲ್ಏಮಾರದಲ್ಲಿ ಕಾಂಡೋಮ್​​ ಸಿಕ್ಕಿದೆ ಎನ್ನಲಾಗಿದೆ.
ಬ್ಯಾರಕ್​ ಪುರದ ಸಂಸದ ಪಾರ್ಥ ಭೌಮಿಕ್ ಹಾಗೂ ಕಮಲ್​ ಅಧಿಕಾರಿ ಅಕ್ರಮ ಹಣವನ್ನು ಶಾಲೆಯಲ್ಲಿ ಬಚ್ಚಿಟ್ಟಿದ್ದಾರೆ. ಬಿಜ್​ಪುರದ ಮಾಜಿ ಶಾಸಕ ಸುಭೋದ್​ ಅಧಿಕಾರಿ  ಜಾರಿ ನಿರ್ದೇಶನಲಾಯ ದಾಳಿ ನಡೆಸಿದ ಸಂದರ್ಭಧಲ್ಲಿ ಹಣವನ್ನು ಬೇರೆಡೆಗೆ ಸಾಗಿಸಿದ್ದರು.  ಕಾಂಡೋಮ್​ ಸಿಕ್ಕಿ. ಈ ಶಾಳಗೆಗೆ ಯಾರು ಆಗಾಗ್ಗೆ ಭೇಟಿ ನೀಡುತ್ತಿದ್ದರು ಎಂಬುವ ಬಗ್ಗೆ ವರದಿ ನೀಡುವಂತೆ ಮಾಹಿತಿ ಕೇಳಿದ್ದೇವೆ ಎಂದು ಸಂದೀಪ್​ ದಾಸ್ ಮಾತನಾಡಿದರು.  

ಶಾಲಾ ಪ್ರಾಂಶುಪಾಲರು ಹೇಳಿದ್ದೇನು

ಪೊಲೀಸರಿಗೆ ಸಿಕ್ಕ ಹಣವು ಶಾಲಾ ಮಕ್ಕಳು ಕಟ್ಟಿದ ಪ್ರವೇಶಾತಿ ಶುಲ್ಕವಾಗಿದೆ. ಸಾಮಾನ್ಯವಾಗಿ ಇದನ್ನು  ಬ್ಯಾಂಕ್​​ಗೆ ಜಮೆ ಮಾಡಲಾಗತ್ತದೆ. ಆದರೆ, ಕಾರಣಾಂತರಗಳಿಂದ ಮಾರ್ಚ್​​, ಏಪ್ರಿಲ್​,  ಮೇನಲ್ಲಿ ಸಂಗ್ರಹವಾದ ಹಣವನ್ನು ಜಮೆ ಮಾಡಲು ಸಾಧ್ಯವಾಗಿಲ್ಲ ಎಂದು ವಿಕಾಸ್​ ಚಂದ್ರಪಾಲ್​ ಸಮರ್ಥನೆ ಕೊಟ್ಟುಕೊಂಡರು. ಆದರೆ, ಬೆಡ್​ ಮತ್ತು ಕಾಂಡೋಮ್​ ಸಿಕ್ಕ ಬಗ್ಗೆ ಮೌನವಾಗಿದ್ದರು ಎನ್ನಲಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net