ಈ ಜಾಲವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡುವುದಾದರೆ,ಫೇಸ್ಬುಕ್ ಮತ್ತು ವಾಟ್ಸಾಪ್ಗಳಲ್ಲಿ ಆಕರ್ಷಕ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತದೆ. ವಂಚಕರು ಸಂತ್ರಸ್ತರಿಗೆ ನಕಲಿ ಮಹಿಳೆಯರ ಫೋಟೋಗಳು, ನಕಲಿ ಒಪ್ಪಂದ ಪತ್ರಗಳು ಮತ್ತು ಧೃಡೀಕರಣ ಪತ್ರಗಳನ್ನು ತೋರಿಸಿ ನಂಬಿಕೆ ಹುಟ್ಟಿಸುತ್ತಾರೆ. ಮೊದಲು ನೋಂದಣಿ ಶುಲ್ಕ ಎಂದು ಸಣ್ಣ ಮೊತ್ತ ಕೇಳುತ್ತಾರೆ. ನಂತರ ವಿಮೆ, ಪ್ರೊಸೆಸಿಂಗ್ ಫೀಸ್ ಎಂದು ಸಾವಿರಾರು ರೂಪಾಯಿಗಳನ್ನು ಪೀಕುತ್ತಾ ಹೋಗುತ್ತಾರೆ. ಆದರೆ, ಇಲ್ಲಿ ಯಾವುದೇ ಮಹಿಳೆ ಇರುವುದಿಲ್ಲ, ಯಾವುದೇ ಒಪ್ಪಂದವೂ ಇರುವುದಿಲ್ಲ. ಹಣ ಸಂದಾಯವಾದ ತಕ್ಷಣ ವಂಚಕರು ನಾಪತ್ತೆಯಾಗುತ್ತಾರೆ.