ಮಿಸ್​ ಆಗಿ 10 ಸಾವಿರ ಪಾವತಿಸಿದ ಉಬರ್​ ಪ್ರಯಾಣಿಕ; ಚಾಲಕ ಮಾಡಿದ ಈ ಕಾರ್ಯಕ್ಕೆ ನೆಟ್ಟಿಗರು ಹೀಗಂದ್ರು..​Uber Driver

​Uber Driver Honesty (ಎಐ ಚಿತ್ರೆ)
​Uber Driver Honesty (ಎಐ ಚಿತ್ರೆ)
Published on

ಪ್ರಮುಖ ಮುಖ್ಯಾಂಶಗಳು

  • ಮಿಸ್​ ಆಗಿ 10 ಸಾವಿರ ಪೇ ಮಾಡಿದ್ದನ್ನು ವಾಪಸ್​ ಕೊಟ್ಟ ಉಬರ್​ ಚಾಲಕ
  • ಸೋಶಿಯಲ್​ ಮೀಡಿಯಾದಲ್ಲಿ ಉಬರ್​ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ
  • ​ಪ್ರಾಮಾಣಿಕತೆ ಮೆಚ್ಚಿ ನೀಡಿದ ಬಹುಮಾನವನ್ನೂ ನಿರಾಕರಿಸಿದ ಚಾಲಕ.
​Uber Driver Honesty : ಹಣಕ್ಕಾಗಿ ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿರುವ ಈ ಕಾಲದಲ್ಲಿ ಯಾರನ್ನ ನಂಬೋದು, ಯಾರನ್ನ ಬಿಡೋದು ಎನ್ನು ತೊಳಲಾಟದಲ್ಲಿ ಪ್ರತಿಯೊಬ್ಬರು ಇರುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ  ಉಬರ್​ ಚಾಲಕನೊಬ್ಬ  ಪ್ರಾಮಾಣಿಕತೆ ಮೆರೆದು ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.   
ಹೌದು, ಒಡಿಶಾ ಮೂಲದ ಟೆಕ್ಕಿಯೊಬ್ಬರು ಮಿಸ್ ಆಗಿ ಉಬರ್​ ಚಾಲಕನಿಗೆ 10 ಸಾವಿರ ಹಣ ಪಾವತಿ ಮಾಡಿದ್ದಾರೆ. ಇದನ್ನು ಕಂಡುಕೊಂಡ ಆತ ಪುನಃ ಟೆಕ್ಕಿಯನ್ನು ಬಿಟ್ಟು ಬಂದ ಅಪಾರ್ಟಮೆಂಟ್​ ಪ್ರದೇಶಕ್ಕೆ  ತೆರಳಿ ಹಣವನ್ನು ವಾಪಸ್ ಕೊಟ್ಟಿರುವ ಕಾರಣ ಸೋಶಿಯಲ್​ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  

ಅಂದು ನಡೆದಿದ್ದೇನು?

ಒಡಿಶಾ ಮೂಲದ ಟೆಕ್ಕಿಯಾದ ದೇಬಾಶಿಶ್​ ತ್ರಿಪಾಠಿ ಎಕ್ಸ್​ನಲ್ಲಿ ಬರೆದುಕೊಂಡಿದ್ದು ಹೀಗೆ,
ನಾನು ಕೆಲಸದ ನಿಮಿತ್ತ ಉಬರ್​​ ಪ್ರಯಾಣವನ್ನು ಬೆಳೆಸಿಕೊಂಡಿದ್ದೆ. ಪ್ರಯಾಣದ ನಂತರ ಶುಲ್ಕ ಪಾವತಿ ಮಾಡಬೇಕಿತ್ತು. ಬಿಸಿನೆಸ್ ಕಾಂಟ್ಯಾಕ್ಟರ್​ಗೆ ಹತ್ತು ಸಾವಿರ ಪಾವತಿ ಮಾಡಬೇಕಿತ್ತು. ಆತನ ಹೆಸರು ಕ್ಯಾಬ್​ ಚಾಲಕನ ಹೆಸರು ಒಂದೇ ಇತ್ತು. ನನ್ನ ಅಚಾತುರ್ಯದಿಂದ ಆತನಿಗೆ ಹತ್ತು ಸಾವಿರ ಪಾವತಿ ಮಾಡಿಬಿಟ್ಟೆ.  ಇದು ನನ್ನ ಅರಿವಿಗೂ ಬಂದಿರಲಿಲ್ಲ.
ಪ್ರಯಾಣಿಕ ಕೊಟ್ಟ ಗಿಫ್ಟ್​ ಸಹ ಪಡೆಯದ ಚಾಲಕ
ಆದರೆ, ಅಂದು ರಾತ್ರಿ 9:30ಕ್ಕೆ ನನ್ನ ಅಪಾರ್ಟ್​ಮೆಂಟ್​​ನ ಸೆಕ್ಯುರಿಟಿಯಿಮದ ಕರೆ ಬಂತು.  ಉಬರ್​ ಚಾಲಕರೊಬ್ಬರು ತಮ್ಮನ್ನು ಹುಡುಕಿಕೊಂಡು ಬಂದಿದ್ದಾರೆ ಎಂದರು. ನಾನು ಕೆಳಗೆ ಹೋದಾಗ ನನ್ನನ್ನು ಡ್ರಾಪ್​ ಮಾಡಿದವ ಅಲ್ಲಿದ್ದ. ನಾನು ಆತನ ಬಳಿ ವಿಷಯ ಏನು ಎಂದು ಕೇಳಿದಾಗ ತಿಳಿದಿದ್ದು ನಾನು ಮಿಸ್ ಆಗಿ ಹತ್ತು ಸಾವಿರ ಪಾವತಿ ಮಾಡಿದ್ದೇನೆ ಎಂದು. ಆತ ಹಣ ಹಿಂತಿರುಗಿಸಿದ. ಆದರೆ, ನಾನು ಕೊಟ್ಟ ಬಹುಮಾನ ಎಷ್ಟೇ ಬೇಡಿಕೊಂಡರು ಆತ ತೆಗೆದುಕೊಂಡಿಲ್ಲ ಎಂದು ಬರೆದುಕೊಂಡಿದ್ದಾರೆ
 ಇಂದಿನ ಆಧುನಿಕ ಕಾಲಘಟ್ಟದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯುಳ್ಳ ಜನರು ಕಾಣಿಸಿಕೊಳ್ಳೋದು ಬಹಳ ಅಪರೂಪ. ಶ್ರೀಕಂಠ ಅವರ ಈ ಗುಣಕ್ಕೆ ನಾನು ನಿಜಕ್ಕೂ ಮನಸೋತು ಹೋಗಿದ್ದೇನೆ. ಜನರಲ್ಲಿ ಮಾನವೀಯತೆ ಎಂದು ಚಿಂತಿಸುತ್ತಿರುವ ಮಧ್ಯೆ ನಿಮ್ಮಂತವರ ಇಂತಹ ಕಾರ್ಯ ನಿಜಕ್ಕೂ ಅವಿಸ್ಮರಣೀಯ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net