ತಾಂತ್ರಿಕ ದೋಷದಿಂದ ಬಡ ರೈತನ ಪತ್ನಿಯ ಅಕೌಂಟ್​ಗೆ 10 ಕೋಟಿ ರೂ. ಜಮಾ; ನನ್ನದಲ್ಲ ವಾಪಸ್ ತೆಗೆದುಕೊಳ್ಳಿ ಎಂದ ಮಹಿಳೆ | Rs 10 Crore

ರೀಟಾ
ರೀಟಾ
Published on
ಲಖನೌ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಬ್ಯಾಂಕ್​ನ ತಾಂತ್ರಿಕ ದೋಷದಿಂದಲೋ ಅಥವಾ ಮತ್ಯಾವುದೋ ನಿಗೂಢತೆಯಿಂದಲೋ ಬಡ ರೈತನೊಬ್ಬನ ಪತ್ನಿಯ ಬ್ಯಾಂಕ್ ಖಾತೆಯಲ್ಲಿ ಸುಮಾರು 10 ಕೋಟಿ ರೂಪಾಯಿ(Rs 10 Crore) ಜಮವಾಗಿದ್ದು, ಅದು ನನ್ನದಲ್ಲ, ವಾಪಸ್ ತೆಗೆದುಕೊಳ್ಳಿ ಎಂದು ಹೇಳಿ ಮಹಿಳೆ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದಾರೆ.
ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ನಿವಾಸಿ ಪರಸ್ಭಾನ್ ಬಹೇಲಿಯಾ ಅವರ ಪತ್ನಿ ರೀಟಾ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಕೃಷಿಯೇ ಅವರ ಜೀವನ ಮೂಲಾದಾಯ. ನವರಾತ್ರಿಯ ಅಷ್ಟಮಿಯ ಸಂದರ್ಭದಲ್ಲಿ, ಹಣ ತೆಗೆದುಕೊಳ್ಳಲು ತಮ್ಮ ಸ್ಥಳೀಯ ಬ್ಯಾಂಕ್‌ಗೆ ತೆರಳಿದ್ದರು. ಆದರೆ ಶಾಖೆ ಮುಚ್ಚಿದ್ದರಿಂದ ಹತ್ತಿರದ ಎಟಿಎಂಗೆ ಹೋಗಿ ತಮ್ಮ ಬ್ಯಾಲೆನ್ಸ್ ಚೆಕ್​ ಮಾಡಿದ್ದರು. ಅಲ್ಲಿ ಅವರ ಖಾತೆಯಲ್ಲಿನ ಅಮೌಂಟ್ ನೋಡಿ ದಿಗ್ಭ್ರಮೆಗೊಂಡಿದ್ದಾರೆ.
ಬ್ಯಾಂಕ್​ ಆಫ್ ಇಂಡಿಯಾದಲ್ಲಿನ ಅವರ ಖಾತೆಯಲ್ಲಿ  9,99,49,588 ರೂ. ಅಂದರೆ ಸುಮಾರು ಹತ್ತು ಕೋಟಿ ರೂಪಾಯಿಗಳ ಬ್ಯಾಲೆನ್ಸ್ ತೋರಿಸಿದೆ. ಇನ್ನೊಮ್ಮೆ ಚೆಕ್​ ಮಾಡಿದ್ದು, ಅಷ್ಟೇ ಹಣವನ್ನು ತೋರಿಸಿದೆ, ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಖಾತೆಯಲ್ಲಿ ಅಷ್ಟು ಹಣವನ್ನು ತೆಗೆದುಕೊಳ್ಳದೇ ರೀಟಾವರು, ಅದು ಎಲ್ಲಿಂದ ಬಂದಿದೆ ಎಂದು ಹಣವನ್ನು ಮುಟ್ಟಬೇಡಿ ಎಂದು ತಮ್ಮ ಕುಟುಂಬಸ್ಥರಿಗೆ ಹೇಳಿದ್ದಾಳೆ ಎನ್ನಲಾಗಿದೆ. 
ತಮ್ಮ ಖಾತೆಯಲ್ಲಿನ ಅಸಾಧಾರಣ ಅಮೌಂಟ್ ಬಗ್ಗೆ ಪರಿಶೀಲಿಸಲು ರೀಟಾ ಮತ್ರು ಅವರ ಕುಟುಂಬ ಬ್ಯಾಂಕ್​ಗೆ ಹೋದಾಗ ಶಾಖೆ ಮುಚ್ಚಿದ್ದರಿಂದ, ಅದೇ ಬ್ಯಾಂಕ್​ನ ಕರೀಮ್​ಗಂಜ್​ ಶಾಖೆಯ ಮ್ಯಾನೇಜರ್ ರಿಷಿಕಾಂತ್ ಪಾಂಡೆಗೆ ತಿಳಿಸಿದ್ದಾರೆ. ಅವರು ತಾಂತ್ರಿಕ ದೋಷ ಅಥವಾ ವಹಿವಾಟಿನ ದೋಷದಿಂದ ಅಮೌಂಟ್ ಜಮಾ ಆಗಿದೆ. ಬ್ಯಾಂಕ್ ತೆರೆದ ಬಳಿಕ ಬನ್ನಿ ತನಿಖೆ ಮಾಡಿ ಪರಿಶೀಲಿಸಲಾಗುವದು ಎಂದಿದ್ದಾರೆ.
ಈ ದೊಡ್ಡ ಮೊತ್ತದ ಘಟನೆಯೂ ಜಿಲ್ಲೆಯಾದ್ಯಂತ ಚರ್ಚೆಯ ವಿಷಯವಾಗಿದ್ದು, ರೀಟಾ ಅವರ ಕುಟುಂಬಕ್ಕೆ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಎಲ್ಲಾ ಅವಕಾಶಗಳು ಇದ್ದಾಗಲೂ, ಹಣಬಳಸದೇ ಇರುವುದನ್ನು ನೋಡಿ ನೆರೆಹೊರೆಯವರು, ಸ್ಥಳೀಯರು ಹಾಗೂ ಸಮಾಜಿಕ ಜಾಲತಾಣದಲ್ಲಿ ಅನೇಕ ಜನ ರೀಟಾ ಮತ್ತು ಅವರ ಕುಟುಂಬವನ್ನು ಶ್ಲಾಘಿಸುತ್ತಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net