ಮುಂದುವರೆದು ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ₹9000 ಕೋಟಿ ಮೊತ್ತದ ವಿಸ್ತರಣಾ ಯೋಜನೆಗಳ ಹೊರತಾಗಿಯು ರೂರ್ಕೆಲಾ ಉಕ್ಕು ಸ್ಥಾವರದಲ್ಲಿ ₹9,513 ಕೋಟಿ ಮೊತ್ತದ ಇತರೆ ವಿಸ್ತರಣಾ ಮತ್ತು ಅಭಿವೃದ್ಧಿ ಯೋಜನೆಗಳು ಜಾರಿಯ ಹಂತದಲ್ಲಿವೆ. ಉಕ್ಕಿನ ಹೊಸ ಮೆಲ್ಟಿಂಗ್ ಶಾಪ್, ಹೊಸ ಕೋಲ್ಡ್ ರೋಲಿಂಗ್ ಗಿರಣಿ, ಉತ್ಪನ್ನ ಪರೀಕ್ಷೆ ಮತ್ತು ಪ್ರಮಾಣೀಕರಣ ಪ್ರಯೋಗಾಲಯ ಮತ್ತು ರಕ್ಷಣಾ ದರ್ಜೆಯ ಉಕ್ಕಿಗಾಗಿ ಕೋಲ್ಡ್ ಪ್ಲೇಟ್ ಲೆವೆಲರ್ಗಳ ಅಭಿವೃದ್ಧಿ ವೇಗಗತಿಯಲ್ಲಿ ನಡೆದಿದೆ. ಇವೆಲ್ಲವೂ ಪ್ರಧಾನಿಗಳ ವಿಕಸಿತ ಭಾರತ ಕನಸು ನನಸು ಮಾಡುವ ಕೈಗಾರಿಕಾ ದೃಷ್ಟಿಕೋನದೊಂದಿಗೆ ಕಾರ್ಯಗತ ಆಗುತ್ತಿವೆ ಎಂದು ಸಚಿವರು ಹೇಳಿದ್ದಾರೆ.