ಐಷಾರಾಮಿ ಫ್ಲ್ಯಾಟ್ ಖರೀದಿಸಿದ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್! Rohit Sharma

 Rohit Sharma
Rohit Sharma
Published on
ಮುಂಬೈ: (Rohit Sharma) ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರು ಮುಂಬೈನಲ್ಲಿ ಅದ್ದೂರಿ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸುವ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ.
ಭಾರತೀಯ ಕ್ರಿಕೆಟಿಗ ರೋಹಿತ್​​ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್​​​ ಅವರು ಮುಂಬೈನ ಪ್ರಭಾದೇವಿಯಲ್ಲಿ 26.30 ಕೋಟಿ ರೂಪಾಯಿ ಬೆಲೆ ಬಾಳುವ ಅಪಾಟ್ಮೆಂಟ್​​ ಖರೀದಿಸಿದ್ದಾರೆ.
ಮುಂಬೈನ ಅತ್ಯಂತ ಪ್ರತಿಷ್ಠಿತ ಮತ್ತು ದುಬಾರಿ ಪ್ರದೇಶಗಳಲ್ಲಿ ಒಂದಾದ ಪ್ರಭಾದೇವಿಯಲ್ಲಿ ಈ ಹೊಸ ಮನೆಯನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಈ ಐಷಾರಾಮಿ ಫ್ಲ್ಯಾಟ್‌ನ ಒಟ್ಟು ಮೌಲ್ಯ ಸುಮಾರು 26.30 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ವರದಿಗಳ ಪ್ರಕಾರ, ಈ ಆಸ್ತಿಯ ನೋಂದಣಿ ಪ್ರಕ್ರಿಯೆಯು ಜನವರಿ ಮೊದಲ ವಾರದಲ್ಲಿ ಪೂರ್ಣಗೊಂಡಿದ್ದು, ಇದಕ್ಕಾಗಿ ರಿತಿಕಾ ಅವರು ಸುಮಾರು 1.57 ಕೋಟಿ ರೂಪಾಯಿಗಳನ್ನು ಸ್ಟ್ಯಾಂಪ್ ಡ್ಯೂಟಿ (ಮುದ್ರಾಂಕ ಶುಲ್ಕ) ರೂಪದಲ್ಲಿ ಪಾವತಿಸಿದ್ದಾರೆ. ಸರಿಸುಮಾರು 2,800 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಈ ನಿವಾಸವು ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿದೆ.
ರಿತಿಕಾ ಅವರ ಹೊಸ ಮನೆ ಇರುವ ಪ್ರಭಾದೇವಿ ಪ್ರದೇಶವು ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ ಮತ್ತು ಸೇನಾಪತಿ ಬಾಪತ್ ಮಾರ್ಗದಂತಹ ಪ್ರಮುಖ ರಸ್ತೆಗಳಿಗೆ ಸಂಪರ್ಕ ಹೊಂದಿದೆ. ಇಲ್ಲಿ ವಾಸಿಸುವ ಜನರು ಸೆಲೆಬ್ರಿಟಿಗಳು ಮತ್ತು ದೊಡ್ಡ ಕೈಗಾರಿಕೋದ್ಯಮಿಗಳು.
ಈಗಾಗಲೇ ಮುಂಬೈನ ವರ್ಲಿಯಲ್ಲಿ ರೋಹಿತ್ ಶರ್ಮಾ ಅವರು ದೈತ್ಯ ಬಂಗಲೆಯನ್ನು ಹೊಂದಿದ್ದು, ಈಗ ಈ ಹೊಸ ಅಪಾರ್ಟ್‌ಮೆಂಟ್ ಅವರ ಆಸ್ತಿಯ ಪಟ್ಟಿಗೆ ಸೇರ್ಪಡೆಯಾದಂತಾಗಿದೆ. ಮುಂಬೈನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸೆಲೆಬ್ರಿಟಿಗಳ ಹೂಡಿಕೆ ನಿರಂತರವಾಗಿ ಹೆಚ್ಚುತ್ತಿರುವುದಕ್ಕೆ ಈ ವಿದ್ಯಮಾನ ಮತ್ತೊಂದು ಉದಾಹರಣೆಯಾಗಿದೆ. ಮುಂಬೈನ ಸುತ್ತಮುತ್ತ ಜಾಗಗಳಲ್ಲಿ ಸೆಲೆಬ್ರಿಟಿಗಳ ಆಸ್ತಿ ಖರೀದಿ ಹೆಚ್ಚುತ್ತಿರುವ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net